'ನಮೋ' ಬ್ಯಾನರ್ ಛಿದ್ರ
ಉಪ್ಪಿನಂಗಡಿ: ನರೇಂದ್ರ ಮೋದಿಯನ್ನು ಬೆಂಬಲಿಸಿ ಅಳವಡಿಸಲಾಗಿದ್ದ ಬೃಹತ್ ಗಾತ್ರದ ಕಟೌಟ್ನ್ನು ಅಪರಿಚಿತ ದುಷ್ಕರ್ಮಿಗಳು ಹರಿದ ಘಟನೆ ಉಪ್ಪಿನಂಗಡಿಯ ಓಡ್ಲ ಎಂಬಲ್ಲಿ ನಡೆದಿದೆ.
ನಮೋ ಭಾರತ ಅಭಿಮಾನಿ ಬಳಗ ಎಂಬ ಸಂಘಟನೆಯ ಆಶ್ರಯದಲ್ಲಿ ಹಾಕಲಾಗಿದ್ದ ಬ್ಯಾನರನ್ನು ಓಡ್ಲ ಸೇತುವೆ ಬಳಿ ಅಳವಡಿಸಲಾಗಿತ್ತು. ಭಾನುವಾರ ಮಧ್ಯರಾತ್ರಿಯ ಬಳಿಕ ಬ್ಯಾನರ್ ಹರಿದು ಹಾಕಿರುವುದು ಕಂಡು ಬಂದಿದೆ.
ಕೃತ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್ ಅತ್ರಮಜಲು, ಇದೊಂದು ಹೇಡಿತನದ ಕೃತ್ಯವಾಗಿದ್ದು, ಜನತೆಯ ಭಾವನೆ ಮೇಲೆ ಮಾಡಲಾದ ಸವಾರಿಯಾಗಿದೆ. ಪೊಲೀಸರು ಈ ಬಗ್ಗೆ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಂಡು ಇಂತಹ ಹೀನ ಕೃತ್ಯ ಪುನರಾವರ್ತನೆಯಾಗದಂತೆ ಎಚ್ಚರ ವಹಿಸಬೇಕೆಂದು ಅಗ್ರಹಿಸಿದ್ದಾರೆ.