ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಂದಾರ್ತಿ ದೇವಾಲಯದಲ್ಲಿ ನಟಿ ರಮ್ಯಾ ಚಂಡಿಕಾಯಾಗ

Rashmi Kasaragodu
Updated On : 22 Oct 2013, 11:18 am

ಕುಂದಾಪುರ: ಮಂಡ್ಯದ ಸಂಸದೆ, ಸ್ಯಾಂಡಲ್‌ವುಡ್ ತಾರೆ ರಮ್ಯಾ, ಇಲ್ಲಿನ ಮಂದಾರ್ತಿ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಸೋಮವಾರ ಚಂಡಿಕಾಯಾಗ ನೆರವೇರಿಸಿದರು.
ಆದರೆ ರಮ್ಯಾ ಅವರಿಗೆ ದೆಹಲಿಯಲ್ಲಿ ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸುವ ತುರ್ತು ಇದ್ದುದರಿಂದ ಅವರು ಈ ಯಾಗದಲ್ಲಿ ಭಾಗವಹಿಸಲಿಲ್ಲ, ಅವರ ಪರವಾಗಿ ಅವರ ಧಾರ್ಮಿಕ ಗುರು, ಕೇರಳದ ಜ್ಯೋತಿಷಿ ಡಾ. ರಾಜನ್ ಯಾಗದಲ್ಲಿ ಭಾಗವಹಿಸಿದ್ದರು.
 ರಮ್ಯಾ ಅವರ ರಾಜಕೀಯ ಮತ್ತು ವೈಯಕ್ತಿಕ ಜೀವನ ಸುಖಮಯವಾಗಲಿ ಎಂಬ ಪ್ರಾರ್ಥನೆಯೊಂದಿಗೆ ಈ ಯಾಗ ನಡೆಸಲಾಗಿದೆ ಎಂದು ಅರ್ಚಕ ಶ್ರೀಪತಿ ಅಡಿಗ ತಿಳಿಸಿದ್ದಾರೆ. ಈ ಪೂಜೆಗೆ ಖುದ್ದು ರಮ್ಯಾ ಅವರೇ ಬರಬೇಕಾಗಿತ್ತಾದರೂ ಕೊನೆಯ ಕ್ಷಣದಲ್ಲಿ ಅವರು ಬರಲಾಗಿಲ್ಲ. ಡಾ. ರಾಜನ್ ಅವರು ಭಾನುವಾರ ಕುಂಬಾಶಿ, ಕೊಲ್ಲೂರು ದೇವಾಲಯಗಳಿಗೂ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಟಿಪ್ಪರ್ ಡಿಕ್ಕಿ: ಪ್ರಾಧ್ಯಾಪಕ ಸಾವು
ಮಂಗಳೂರು: ಎಕ್ಕೂರು ಕಾಲೇಜ್ ಪ್ರಾಧ್ಯಾಪಕ ಸೋಮೇಶ್ವರ ಇಖ್ಲಾಸ್ ಅಹಮ್ಮದ್ (54) ಜೆಪ್ಪಿನಮೊಗರು ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಎಕ್ಕೂರು ಮೀನುಗಾರಿಕೆ ಕಾಲೇಜ್‌ನಲ್ಲಿ ಸಹಾಯಕ ಪ್ರಧ್ಯಾಪಕರಾಗಿದ್ದರು. ಅವರು ಕಾಲೇಜ್‌ನಿಂದ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಮಣ್ಣು ಹೊತ್ತು ಸಾಗುತ್ತಿದ್ದ ಟಿಪ್ಪರ್ ಇದ್ದಕ್ಕಿದ್ದಂತೆ ಎಡಕ್ಕೆ ತಿರುಗಿದಾಗ ಬೈಕ್‌ಗೆ ಡಿಕ್ಕಿಯಾಯಿತು. ಬೈಕ್ ಸಂಪೂರ್ಣ ಟಿಪ್ಪರ್ ಅಡಿಭಾಗದಲ್ಲಿ ಬಿದ್ದಿದೆ. ಗಂಭೀರ ಗಾಯಗೊಂಡಿದ್ದಇಖ್ಲಾಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement