ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಗು ಸೊಂಟಕ್ಕೆ ಕಟ್ಟಿ ಕಡಲಿಗೆ ಹಾರಿದ ತಾಯಿ

Rashmi Kasaragodu
Updated On : 22 Oct 2013, 11:17 am

ಮಂಗಳೂರು: ದಾಂಪತ್ಯ ಸಮಸ್ಯೆಯಿಂದ ನೊಂದ ಮಹಿಳೆ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಪಣಂಬೂರು ತೀರದಲ್ಲಿ ಕಡಲಿಗೆ ಹಾರಿದ್ದಾಳೆ. ಜೀವರಕ್ಷದಳದವರು ನದಿಗೆ ಹಾರಿ ಮಹಿಳೆಯನ್ನು ರಕ್ಷಿಸಿದರೂ 9 ತಿಂಗಳ ಮಗುನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
 ಕುದ್ರೋಳಿ ಜೋಡುಪಳ್ಳಿಯ ನಝೀಮಾ (22) ತನ್ನ 9 ತಿಂಗಳ ಮಗು ನಝೀಮ್‌ನನ್ನು ಶಾಲ್‌ನಲ್ಲಿ ಸೊಂಟಕ್ಕೆ ಕಟ್ಟಿ ಸೋಮವಾರ ಸಂಜೆ ಕಡಲಿಗೆ ಹಾರಿದ್ದರು. ಇದನ್ನು ನೋಡಿದ ಜೀವರಕ್ಷಕದಳದವರು ಆಕೆಯನ್ನು ಎಳೆದು ತೀರಕ್ಕೆ ತಂದಿದ್ದರು.
 'ಮಹಿಳೆ ಬಚಾವ್ ಆದರೂ ಸೊಂಟದಲ್ಲಿ ಕಟ್ಟಿದ್ದ ಕಾರಣಕ್ಕೆ ಮಗು ನೀರಲ್ಲಿ ತುಂಬ ಹೊತ್ತು ಮುಳುಗಿ ಮೃತಪಟ್ಟಿತ್ತು. ಮಹಿಳೆ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಜೀವರಕ್ಷಕದಳದ ಮುಖ್ಯಸ್ಥ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.
 ಗಂಡ ಹೆಂಡಿರ ನಡುವಿನ ಜಗಳವೇ ಈ ಕೃತ್ಯವೆಸಗಲು ಕಾರಣ ಎನ್ನಲಾಗಿದೆ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement