ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಳ್ಯ: ಸಿಡಿಲು ಬಡಿದು ಮಹಿಳೆ, ಮಗು ಗಾಯ

Rashmi Kasaragodu
Updated On : 22 Oct 2013, 11:17 am

ಸುಳ್ಯ: ಸಿಡಿಲು ಬಡಿದು ಮಹಿಳೆ ಹಾಗೂ ಮಗು ಗಾಯಗೊಂಡ ಘಟನೆ ಭಾನುವಾರ ಐವರ್ನಾಡಿನ ಮುಚ್ಚಿನಡ್ಕದಲ್ಲಿ ಸಂಭವಿಸಿದೆ. ಐವರ್ನಾಡು ಗ್ರಾಮದ ಮುಚ್ಚಿನಡ್ಕ ಸುರೇಶ್ ಎಂಬವರ ಪತ್ನಿ ಗೀತಾ ಹಾಗೂ ಮಗು ಮನೆಯೊಳಗೆ ಕುಳಿತುಕೊಂಡಿದ್ದಾಗ ಒಮ್ಮೆಲೇ ಮನೆಯ ದಾರಂದ ಹಾಗೂ ಗೋಡೆಗೆ ಸಿಡಿಲು ಬಡಿದ ಪರಿಣಾಮ ಗೀತಾ ಹಾಗೂ ಮಗುವಿಗೆ ತಗುಲಿ ಸ್ಮೃತಿತಪ್ಪಿ ಬಿದ್ದರು. ತಕ್ಷಣ ಅವರನ್ನು ಮನೆಯವರು ಹಾಗೂ ನೆರೆಕರೆಯವರು ಸೇರಿ ಜೀಪಿನಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಇಬ್ಬರು ಚೇತರಿಸಿಕೊಂಡಿದ್ದಾರೆ.
ಸಿಡಿಲಿಗೆ ಕುಸಿದ ವ್ಯಕ್ತಿ: ಕನಕಮಜಲು ಗ್ರಾಮದ ನೆಡಿಲು ದಿ. ಐತ್ತಪ್ಪ ಗೌಡರ ಪುತ್ರ ಸತೀಶ್ ಎಂಬವರೂ ಸಿಡಿಲಿಗೆ ಆಘಾತಗೊಂಡಿದ್ದಾರೆ. ಮನೆಯ ಬಾಗಿಲ ಬಳಿ ಇದ್ದ ಇವರು ಸಿಡಿಲು ಬಡಿತಕ್ಕೆ ಒಮ್ಮೆಲೆ ಶಾಕ್ ಹೊಡೆದಂತಾಗಿ ಅಲ್ಲೆ ಕುಸಿದರು. ಬಳಿಕ ಮನೆಯವರು ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ ನಂತರ ಚೇತರಿಸಿಕೊಂಡರೆಂದು ತಿಳಿದುಬಂದಿದೆ.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement