ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

2 ಲಕ್ಷ ಮೌಲ್ಯದ ಮರದ ದಿಮ್ಮಿ ವಶ, ಓರ್ವ ಬಂಧನ

Rashmi Kasaragodu
Updated On : 23 Oct 2013, 11:31 am

ಪುತ್ತೂರು: ಮರ ಅಕ್ರಮ ಸಾಗಾಟ ಪ್ರಕರಣವನ್ನು ಮಂಗಳವಾರ ಪತ್ತೆ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು ರು. 2 ಲಕ್ಷ ಮೌಲ್ಯದ ಸೊತ್ತು ಸಹಿತ ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ತಾಲೂಕಿನ ಪಾಲ್ತಾಡು ಗ್ರಾಮದ ಅಂಕತ್ತಡ್ಕ ಎಂಬಲ್ಲಿ ಅಕ್ರಮವಾಗಿ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹವನ್ನು ವಶಕ್ಕೆ ಪಡೆದುಕೊಂಡಿದ್ದು, ಚಾಲಕ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಅಬೂಬಕ್ಕರ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯು ಬೆಳ್ಳಾರೆಯಿಂದ ಕುಂಬ್ರ ಕಡೆಗೆ ಪಿಕಪ್ನಲ್ಲಿ ಕಿರಾಲ್ಬೋಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಪುತ್ತೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್ ನೇತೃತ್ವದಲ್ಲಿ ಪುತ್ತೂರು ಶಾಖಾ ಉಪ ವಲಯ ಅರಣ್ಯಾಧಿಕಾರಿ ಕೆ. ನಾರಾಯಣ ಹಾಗೂ ಕಾಳಭೈರವ ಗಸ್ತು ತಂಡದ ಸಿಬ್ಬಂದಿ ತಂಡ ಪಾಲ್ಗೊಂಡಿದ್ದರು. ಉಪ ವಲಯ ಅರಣ್ಯಾಧಿಕಾರಿ ಕೆ.ನಾರಾಯಣ, ಅರಣ್ಯ ರಕ್ಷಕರಾದ ವೆಂಕಟೇಶ್ ಮಗೇರ, ರಾಮಚಂದ್ರ, ಬಿ.ಟಿ. ಪ್ರಕಾಶ್, ಸಂಗಮೇಶ್ ನೀರಲಗಿ, ಅರಣ್ಯ ವೀಕ್ಷಕ ದೇವಪ್ಪ ಹಾಗೂ ಇಲಾಖೆ ವಾಹನ ಚಾಲಕ ಅಶೋಕ್ ನಾಯರ್ ಕಾರ್ಯಾಚರಣೆಯಲ್ಲಿದ್ದರು. ಪುತ್ತೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್ ಪ್ರಕರಣ ದಾಖಲಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement