ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕರ್ಣಾಟಕ ಬ್ಯಾಂಕ್ಗೆ ರು. 123.12 ಕೋಟಿ ನಿವ್ವಳ ಲಾಭ

Rashmi Kasaragodu
Updated On : 23 Oct 2013, 11:31 am

ಮಂಗಳೂರು: ಕರ್ಣಾಟಕ ಬ್ಯಾಂಕ್ ಸೆಪ್ಟೆಂಬರ್ ಕೊನೆಯ ಅರ್ಧ ವಾರ್ಷಿಕ ಅವಧಿಯಲ್ಲಿ ರು. 123.12 ಕೋಟಿ ನಿವ್ವಳ ಲಾಭ ಗಳಿಸಿದೆ. ಆರಂಭಿಕ ಲಾಭಾಂಶ ರು. 101.45 ಕೋಟಿಯಿಂದ ರು. 429.15 ಕೋಟಿಗೆ ಏರಿಕೆಯಾಗಿದ್ದು, ಶೇ.30.96 ಪ್ರಗತಿ ದಾಖಲಿಸಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್ ತಿಳಿಸಿದ್ದಾರೆ.
 ಬ್ಯಾಂಕಿನ ವಹಿವಾಟು ರು. 64.483 ಕೋಟಿಗೆ ತಲುಪಿದ್ದು, ಕಳೆದ ವರ್ಷ ರು. 56,363 ಕೋಟಿ. ಅಂದರೆ ಶೇ.14.41 ಪ್ರಗತಿ ದಾಖಲಿಸಿದೆ. ಠೇವಣಾತಿಯಲ್ಲಿ ರು. 38,014 ಕೋಟಿ ತಲುಪಿದ್ದು, ಶೇ.11.91 ಪ್ರಗತಿ ಕಂಡಿದೆ. ಮುಂಗಡ ನೀಡಿಕೆಯಲ್ಲಿ ರು. 26,429 ಕೋಟಿ ದಾಖಲಿಸಿ ಶೇ.18.19 ಪ್ರಗತಿ ಕಾಣಿಸಿದೆ. ಉಳಿತಾಯ ಖಾತೆಯಲ್ಲಿ ರು. 1067 ಕೋಟಿಯಿಂದ ರು. 9037 ಕೋಟಿಗೆ ಏರಿಕೆಯಾಗಿದ್ದು, ಶೇ.13.39 ಪ್ರಗತಿಯಾಗಿದೆ. ನಿವ್ವಳ ಬಡ್ಡಿ ಆದಾಯದಲ್ಲಿ ರು. 80.11 ಕೋಟಿಯಿಂದ ರು. 534.64 ಕೋಟಿ ತಲುಪಿದ್ದು, ಶೇ.17.62 ಪ್ರಗತಿ ಕಂಡಿದೆ. ಬಂಡವಾಳ ಪರ್ಯಾಪ್ತತೆ ಸರಾಸರಿ ಕನಿಷ್ಠ ಶೇ.9 ಬೇಡಿಕೆಯಯಲ್ಲಿ ಶೇ.13.47ರಷ್ಟಿದೆ. ಈವರೆಗೆ ಬ್ಯಾಂಕ್ 73 ಸೇವಾ ಕೇಂದ್ರ ತೆರೆದಿದ್ದು, 8 ಶಾಖೆ ಹಾಗೂ 65 ಎಟಿಎಂ ತೆರೆದಿದೆ. 2014 ಮಾರ್ಚ್ ಒಳಗೆ 20 ರಾಜ್ಯಗಳಲ್ಲಿ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 1,200 ಸೇವಾ ಕೇಂದ್ರ ತೆರೆಯುವ ಯೋಚನೆ ಇದೆ. ಅಲ್ಲದೆ 600 ಬ್ಯಾಂಕ್ ಶಾಖೆ ಹಾಗೂ ಎಟಿಎಂ ತೆರೆಯಲು ಉದ್ದೇಶಿಸಲಾಗಿದೆ ಎಂದರು. ಈ ಅರ್ಧವಾರ್ಷಿಕ ಅವಧಿಯಲ್ಲಿ ಬ್ಯಾಂಕ್ ಸಾಧನೆಗೆ ಹಲವು ಪ್ರಶಸ್ತಿ ಲಭಿಸಿದೆ ಎಂದಿದ್ದಾರೆ. 2013-14ನೇ ಸಾಲಿನಲ್ಲಿ ಬ್ಯಾಂಕ್ ರು. 78 ಸಾವಿರ ಕೋಟಿ ವಹಿವಾಟು ನಡೆಸಿ, ರು. 45,500 ಕೋಟಿ ಠೇವಣಾತಿ ಹಾಗೂ ರು. 32,500 ಕೋಟಿ ಮುಂಗಡ ಹೊಂದುವ ಗುರಿ ಇರಿಸಿಕೊಂಡಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement