ಮಂಗಳೂರು: ಮೋಡ, ಮಳೆ
ಮಂಗಳೂರು: ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಅಪರಾಹ್ನ ಮೋಡಮುಸುಕಿದ ವಾತಾವರಣ ಕಂಡುಬಂದಿದ್ದು, ಆಗೊಮ್ಮೆ ಈಗೊಮ್ಮೆ ತುಂತುರು ಮಳೆ ಹನಿದಿದೆ.
ಬೆಳಗ್ಗಿನಿಂದಲೇ ಆಗಸದಲ್ಲಿ ಬಿಸಿಲು ಮಾಯವಾಗಿ ಮೋಡ ಕವಿಯತೊಡಗಿತ್ತು. ಮಧ್ಯಾಹ್ನವಾಗುತ್ತಿದ್ದಂತೆ ತಂಗಾಳಿ ಜತೆ ಮಳೆಯ ವಾತಾವರಣ. ಒಂದಷ್ಟು ಮಳೆಯೂ ಹನಿಯಿತು. ಸಂಜೆ ವೇಳೆ ತುಸು ಗಾಳಿ ಬೀಸಿರುವುದರಿಂದ ಮಹಾನಗರ ಪಾಲಿಕೆ ವ್ಯಾಪ್ತಿಯ ಕಾರ್ಸ್ಟ್ರೀಟ್ ಬಳಿ ಹೊಟೇಲ್ವೊಂದರ ಕಂಪೌಂಡ್ನಲ್ಲಿದ್ದ ತೆಂಗಿನ ಮರ ಬಿದ್ದು ಇಂದಿರಾ ಶೆಟ್ಟಿ ಎಂಬವರ ಮನೆ ಹಾನಿಗೀಡಾಗಿದೆ. ಮನೆಯಲ್ಲಿ ಮನೆಮಂದಿ ಇದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಮಾಡಿಗೆ ಹಾನಿಯಾಗಿದೆ. ಮಂಗಳವಾರ ಬೆಳಗ್ಗಿನವರೆಗೆ ಸುಳ್ಯದಲ್ಲಿ ಮಾತ್ರ 23.4 ಮಿಲಿ ಮೀಟರ್ ಮಳೆ ದಾಖಲಾಗಿದೆ.