ಮಲ್ಲೂರು ಘರ್ಷಣೆ: 50 ಮಂದಿ
ಮಂಗಳೂರು: ಸೋಮವಾರ ರಾತ್ರಿ ಮಲ್ಲೂರಿನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
50ಕ್ಕೂ ಹೆಚ್ಚು ಮಂದಿ ದುಷ್ಕರ್ಮಿಗಳು ತಮ್ಮ ಮನೆಗೆ ನುಗ್ಗಿ ಕುಂಞಪ್ಪ ಪೂಜಾರಿ ಮತ್ತು ಉಮಾವತಿಗೆ ಹಲ್ಲೆ ನಡೆಸಿದ್ದಾರೆ ಎಂದು ಮಲ್ಲೂರು ನಿವಾಸಿ ಲತಾ ದೂರು ನೀಡಿದ್ದಾರೆ. ದುಷ್ಕರ್ಮಿಗಳು ಮೈಮೇಲೆ ಕೈಹಾಕಿ ಮಾನಭಂಗಕ್ಕೂ ಯತ್ನಿಸಿದ್ದಾರೆ. 60 ಸಾವಿರ ಮೌಲ್ಯ ಚಿನ್ನದ ಸರವನ್ನು ಲೂಟಿ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಮೇರಮಜಲು ಸಂಕೇತ್ ಶೆಟ್ಟಿ ನೀಡಿದ ದೂರಿನಲ್ಲಿ 50 ಮಂದಿ ದುಷ್ಕರ್ಮಿಗಳ ಗುಂಪು ತನ್ನ ಮೇಲೆಮತ್ತು ಚರಣ್ ಮೇಲೆ ಹಲ್ಲೆ ನಡೆಸಿದೆ. ರಿಕ್ಷಾವನ್ನು ಗುದ್ದಿ ಹಾಳು ಮಾಡಿದ್ದಾರೆ. ತನ್ನ ಬಳಿ ಇದ್ದ 2 ಸಾವಿರ ವನ್ನು ಲೂಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರೂ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಲ್ಲೂರು ಬಳಿ ಸೋಮವಾರ ರಾತ್ರಿ ಅಂತಿಮ ಸಂಸ್ಕಾರಕ್ಕೆಂದು ಬಂದವರು ಬೈಕ್ ಪಾರ್ಕ್ ಮಾಡಿದ್ದರು. ಈ ಬೈಕ್ ಚಕ್ರದ ಗಾಳಿ ತೆಗೆದು, ಬೈಕ್ ತುಂಬಾ ಗೀರಿ ಹಾನಿ ಮಾಡಿದ್ದರು. ಇದನ್ನು ಪ್ರಶ್ನಿಸಿದ ವೇಳೆ ಒಂದೇ ಸಮುದಾಯಕ್ಕೆ ಸೇರಿದ 50ಕ್ಕೂ ಹೆಚ್ಚು ಮಂದಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೆ ಕುಂಞಪ್ಪ ಎಂಬವರ ಮನೆಗೆ ನುಗ್ಗಿ ವೃದ್ಧರ ಮೇಲೆ, ಮಹಿಳೆಯರ ಮೇಲೂ ಹಲ್ಲೆ ನಡೆಸಿದ್ದಾರೆ. ಆದರೆ ಪೊಲೀಸರು ಇದುವರೆಗೆ ಯಾರನ್ನು ಬಂಧಿಸಿಲ್ಲ. ಮಲ್ಲೂರು ಬಳಿ ಇತರ ರಿಕ್ಷಾಗಳಿಗೂ ಹಾನಿ ಮಾಡಲಾಗಿದೆ.
ರಿಕ್ಷಾ ಮುಷ್ಕರ: ಮಲ್ಲೂರು ರಿಕ್ಷಾ ತಂಗುದಾಣದಲ್ಲಿ ಮಂಗಳವಾರ ಬೆಳಗ್ಗೆ ರಿಕ್ಷಾ ಚಾಲಕರು ಘಟನೆ ಖಂಡಿಸಿ ಮುಷ್ಕರ ಮಾಡಿದ್ದಾರೆ. ವಿನಾ ಕಾರಣ ಹಲ್ಲೆ ನಡೆಸಿದ ದುಷ್ಕರ್ಮಿಗಳ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.