ಸುಳ್ಯ: ಸಿಡಿಲು ಬಡಿದು ಮನೆ ಭಸ್ಮ, ದನ ಸಾವು
ಸುಳ್ಯ: ಸುಳ್ಯದಲ್ಲಿ ಮಂಗಳವಾರ ಸಂಜೆ ಗುಡುಗು- ಸಿಡಿಲು ಸಹಿತ ಭಾರಿ ಮಳೆ ಸುರಿದಿದ್ದು, ಅಡ್ಕಾರು ಬಳಿ ಸಿಡಿಲು ಬಡಿದು ಮನೆ ಭಸ್ಮಗೊಂಡಿದೆ.
ಅಡ್ಕಾರಿನ ಪದವು ಎಂಬಲ್ಲಿನ ಕೃಷ್ಣ ನಾಯ್ಕ ಎಂಬವರ ಮನೆಗೆ ಸಿಡಿಲು ಬಡಿದು ಮನೆ ಸಂಪೂರ್ಣ ಹೊತ್ತಿ ಉರಿದಿದೆ. ಮನೆಯೊಳಗಿದ್ದ ಬಾಲಕಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ದನ ಸಾವು: ಮರ್ಕಂಜ ಗ್ರಾಮದ ಕುದ್ಕುಳಿ ಹರೀಶ್ ಎಂಬವರ ಕೊಟ್ಟಿಗೆಗೆ ಸಿಡಿಲು ಬಡಿದು ದನವೊಂದು ಮೃತಪಟ್ಟಿದೆ. ಮನೆಯ ವಿದ್ಯುತ್ ಮೀಟರ್ ಬೋರ್ಡ್ ಸಂಪೂರ್ಣ ಹಾನಿಗೀಡಾಗಿದ್ದು, ಮನೆ ಗೋಡೆಯೂ ಬಿರುಕು ಬಿಟ್ಟಿದೆ.