ಅಚ್ಯುತದಾಸ ನಿಧನಕ್ಕೆ ಸಂತಾಪ
ಮಂಗಳೂರು: ಕೀರ್ತನ ಕೇಸರಿ ಸಂತ ಭದ್ರಗಿರಿ ಅಚ್ಯುತದಾಸ ನಿಧನಕ್ಕೆ ಬಿಜೆಪಿ ಜಿಲ್ಲಾ ಸಮಿತಿ ಸಂತಾಪ ವ್ಯಕ್ತಪಡಿಸಿದೆ. 75ಕ್ಕೂ ಅಧಿಕ ಕೀರ್ತನ ಕೃತಿಗಳನ್ನು ರಚಿಸಿ, ಐದು ದಶಕಕ್ಕೂ ಅಧಿಕ ಅಖಂಡ ಕೀರ್ತನೆ, ಹರಿಕಥೆ ಮೂಲಕ ವೈದಿಕ ಧರ್ಮ ಮತ್ತು ಸಂತ ಸಾಹಿತ್ಯ ಪ್ರಚಾರ ಮಾಡಿದ್ದರು. ಕನ್ನಡ, ತುಳು, ಕೊಂಕಣಿ, ಮರಾಠಿ, ಹಿಂದಿ ಭಾಷೆಗಳಲ್ಲಿ ನಿರರ್ಗಳವಾಗಿ ಧರ್ಮಪ್ರಚಾರ ಮಾಡಿದ್ದರು. ನಾಡೋಜ ಪ್ರಶಸ್ತಿ ಸಹಿತ ಅನೇಕ ಗೌರವಕ್ಕೆ ಪಾತ್ರರಾದ ಅವರ ನಿಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್ ಸಂತಾಪ ಸೂಚಿಸಿದ್ದಾರೆ.