ಆಸ್ಪತ್ರೆಯಲ್ಲಿ ಬಾಣಂತಿ ಸಾವು
ಮಂಗಳೂರು: ಮಗುವಿಗೆ ಜನ್ಮ ನೀಡಿದ ಬಳಿಕ ಬಾಣಂತಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮನೆಯವರು ವೈದ್ಯರ ನಿರ್ಲಕ್ಷ ಎಂದು ಆರೋಪಿಸಿದ್ದಾರೆ. ಮೂಲ್ಕಿ ಐಕಳ ಸಮೀಪದ ಮಾಧವ ಎಂಬರ ಪತ್ನಿ ಪ್ರೇಮಾ ಅಮೀನ್ (35) ಮೃತಪಟ್ಟವರು. ವಾರದ ಹಂದೆ ಆಧಾರ್ ಕಾರ್ಡ್ ಮಾಡಿಸಲೆಂದ ನಗರಗಕ್ಕೆ ಬಂದಿದ್ದರು. 8 ತಿಂಗಳ ಗರ್ಭಿಣಿ ಪತ್ನಿಯನ್ನು ತಪಾಸಣೆಗೆ ಎಂದು ಲೇಡಿಗೋಶನ್ ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದಾಗ ಹೆಚ್ಚಿನ ರಕ್ತದೊತ್ತಡ ಸಹಿತ ಸಂಕೀರ್ಣ ಸಮಸ್ಯೆ ಇರವ ಹಿನ್ನೆಲೆಯಲ್ಲಿ ವೈದ್ಯರು ತಕ್ಷಣ ದಾಖಲಾಗುವಂತೆ ಸೂಚಿಸಿದರು. ಮೂರು ದಿನಗಳ ಬಳಿಕ ಹೆರಿಗೆಯಾಯಿತು. ಅವಧಿಗೆ ಮುಂಚಿತವಾಗಿ ಹುಟ್ಟಿದ ಮಗು ಮೃತಪಟ್ಟಿತು.
'ಪ್ರೇಮಾಳಿಗೆ ಇಂಜಕ್ಷನ್ ನೀಡಿದ ಬಳಿಕ ಪ್ರಜ್ಞೆ ಕಳೆದುಕೊಂಡರು, ವೈದ್ಯರು ನೆರವಿಗೆ ಬರಲೇ ಇಲ್ಲ'ಎಂದು ಭಾವ ವಸಂತ ಪೂಜಾರಿ ಆರೋಪಿಸಿದರು. ಪ್ರೇಮಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರೂ ಲೇಡಿಗೋಶನ್ ಆಸ್ಪತ್ರೆಯವರು ಬಿಡಲಿಲ್ಲ ಎಂದು ವಸಂತ್ ದೂರಿದ್ದಾರೆ.
'ಪ್ರೇಮಾ ಅ.15ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ವೇಳೆ ಡಯಾಬಿಟಿಕ್ ರೋಗ ಹತೋಟಿ ಮೀರಿದ್ದರಿಂದ ಸಾವು ಸಂಭವಿಸಿದೆ ಎಂದು ವೈದ್ಯಕೀಯ ಅಧಿಕಾರಿ ರಾಜೇಶ್ವರಿ ದೇವಿ ಸ್ಪಷ್ಟಪಡಿಸಿದ್ದಾರೆ. ವೆನ್ಲಾಕ್ನ ತೀವ್ರ ನಿಗಾ ಘಟಕ್ಕೆ ವರ್ಗಾಯಿಸಿ ಹೆಚ್ಚಿನ ಚಿಕಿತ್ಸೆ ನೀಡಿದರೂ ಸ್ಪಂದಿಸಲಿಲ್ಲ' ಎಂದು ವೈದ್ಯರು ಹೇಳಿದರು.