ಬಚ್ಚಲು ಕೋಣೆ ಇಣುಕು ಕಾಮಿ ಬಾವಿಗೆ ಬಿದ್ದ!
ಮಂಗಳೂರು: ಬಚ್ಚಲುಮನೆ ಇಣುಕಲು ಹೋದ 'ಇಣುಕು ಕಾಮಿ'ಯೊಬ್ಬ ಸ್ಥಳೀಯರಿಂದ ತಪ್ಪಿಸಿಕೊಳ್ಳಲು ಹೋಗಿ ತೆರೆದ ಬಾವಿಗೆ ಬಿದ್ದ ಪ್ರಸಂಗ ಕೋಟೆಕಾರ್ ಅಂಚೆಕಚೇರಿ ಬಳಿ ನಡೆದಿದೆ. ಒಂದು ಗಂಟೆ ಕಾಲ ಬಾವಿಯಲ್ಲಿದ್ದ ಆತನನ್ನು ಬಳಿಕ ಅಗ್ನಿಶಾಮಕದಳದವರು ಮೇಲೆತ್ತಿದರು. ಉತ್ತರ ಕರ್ನಾಟಕ ಭಾಗದ ಕಾರ್ಮಿಕ ಉಮೇಶ್ ಎಂಬಾತ ಮಂಗಳವಾರ ರಾತ್ರಿ ಮನೆಯೊಂದರ ಬಚ್ಚಲು ಕೋಣೆಯನ್ನು ಇಣುಕಿ ನೋಡುತ್ತಿದ್ದ. ಇದನ್ನು ನೋಡಿದ ಸ್ಥಳೀಯರು ಆತನನ್ನು ಹಿಡಿಯಲು ಯತ್ನಿಸಿದರು. ಆಗ ಆತ ತಪ್ಪಿಸಿಕೊಳ್ಳುವ ಭರದಲ್ಲಿ ಮನೆ ಆವರಣದಲ್ಲಿದ್ದ ಬಾವಿಗೆ ಬಿದ್ದಿದ್ದಾನೆ. ಬಾವಿಯಲ್ಲಿ ಒಂದು ಗಂಟೆ ಕಾಲ ಈಜುತ್ತಲೇ ಕಾಲ ಕಳೆದಿದ್ದ. ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ದಳ ಸಿಬ್ಬಂದಿ ಉಮೇಶ್ನನ್ನು ಮೇಲೆತ್ತಿದರು. ಈ ಸಂದರ್ಭದಲ್ಲಿ ಸ್ಥಳೀಯರು ಇಣುಕುಕಾಮಿಗೆ ಚೆನ್ನಾಗಿ ಚಚ್ಚಿದ್ದಾರೆ. ಉಳ್ಳಾಲ ಪೊಲೀಸರು ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.