ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಲ್ಯ: ಸಿಡಿಲು ಬಡಿದು ಮನೆಗೆ ಹಾನಿ

Rashmi Kasaragodu
Updated On : 24 Oct 2013, 11:47 am

ಉಪ್ಪಿನಂಗಡಿ: ಬಲ್ಯ ಗ್ರಾಮದ ಸಂಪಡ್ಕ ಎಂಬಲ್ಲಿ ಅಂಗಾರ ಅಜಿಲ ಎಂಬವರ ಮನೆಗೆ ಸಿಡಿಲು ಬಡಿದು ಹಾನಿಯುಂಟಾದ ಘಟನೆ ಮಂಗಳವಾರ ಸಂಜೆ ನಡೆದಿದೆ. ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಟಿವಿ, ಇಸ್ತ್ರಿ ಪೆಟ್ಟಿಗೆ ಸುಟ್ಟು ಹೋಗಿದೆ. ವಿದ್ಯುತ್ ವಯರ್ಗಳು, ಸ್ವಿಚ್ ಬೋರ್ಡ್ಗಳು ಹಾನಿಗೊಂಡಿವೆ. ಸಿಡಿಲು ಬಡಿತದ ವೇಳೆ ಅಂಗಾರ ಅಜಿಲರವರು ಕೆಲಸದ ನಿಮಿತ್ತ ಹೊರ ಹೋಗಿದ್ದು ಮನೆಯಲ್ಲಿದ್ದ ಅಂಗಾರರ ಪತ್ನಿ ಮತ್ತು ಮಕ್ಕಳು ಮೊಮ್ಮಕ್ಕಳು ಮನೆಯಿಂದ ಹೊರಗೆ ಓಡಿ ಅಪಾಯದಿಂದ ಪಾರಾಗಿದ್ದಾರೆ. ಬಲ್ಯ ಗ್ರಾಮದ ಕುದ್ರಡ್ಕ ಚಂದಪ್ಪ ಮೂಲ್ಯ ಎಂಬವರ ಮನೆಗೂ ಸಿಡಿಲು ಬಡಿದಿದ್ದು, ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್ ವಯರ್ಗಳು ಸುಟ್ಟು ಹೋಗಿವೆ. ಮನೆ ಸಮೀಪದ ತೆಂಗಿನ ಮರವೊಂದು ಸಹ ಸುಟ್ಟುಹೋಗಿದೆ.ಘಟನಾ ಸ್ಥಳಕ್ಕೆ ಕುಟ್ರುಪ್ಪಾಡಿ ಗ್ರಾ.ಪಂ. ಅಧ್ಯಕ್ಷ ಸಂಜೀವ ಪೂಜಾರಿ, ತಾ.ಪಂ. ಸದಸ್ಯ ಭಾಸ್ಕರ ಗೌಡ ಇಚ್ಲಂಪಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೂಯಿಸ್ ಸೈಮನ್ ರೊಡ್ರಿಗಸ್, ಗ್ರಾ.ಪಂ. ಮಾಜಿ ಅಧ್ಯಕ್ಷ ದೇವಯ್ಯ ಪನ್ಯಾಡಿ, ಗ್ರಾಮಕರಣಿಕ ಕೋಟ್ರೆಶ್ ಭೇಟಿ ನೀಡಿ, ಹಾನಿಯ ಪರಿಶೀಲನೆ ನಡೆಸಿದ್ದಾರೆ.


ಇಂದು ರಸ್ತೆ ತಡೆ, ಪ್ರತಿಭಟನೆ
ಉಪ್ಪಿನಂಗಡಿ: ಸೌಜನ್ಯ ಕೊಲೆ ಪ್ರಕರಣದಲ್ಲಿ ಸಮರ್ಪಕ ತನಿಖೆಯಾಗಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಅಗ್ರಹಿಸಿ ಆಲಂಕಾರಿನಲ್ಲಿ ಸಾರ್ವಜನಿಕರಿಂದ ಗುರುವಾರ ರಸ್ತೆ ತಡೆ, ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಈ ಬಗ್ಗೆ ಆಲಂಕಾರಿನ ರೈತ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement