ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮರದ ದಿಮ್ಮಿ ಅಕ್ರಮ ಸಾಗಾಟ; ಲಾರಿ, ಬೈಕ್ ವಶ

Rashmi Kasaragodu
Updated On : 24 Oct 2013, 11:47 am

ಸುಬ್ರಹ್ಮಣ್ಯ: ಅಕ್ರಮವಾಗಿ ಮರ ದಿಮ್ಮಿಗಳನ್ನು ಮಂಗಳವಾರ ಲಾರಿಯಲ್ಲಿ ಸಾಗಿಸುತ್ತಿದ್ದ ವೇಳೆ ಅರಣ್ಯ  ಇಲಾಖೆಯವರು ದಾಳಿ ನಡೆಸಿ ಲಾರಿ ಮತ್ತು ಅದರೊಂದಿಗೆ ಇದ್ದ ಬೈಕ್ ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ಲಾರಿ ಮತ್ತು ಬೈಕ್ನಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಪಂಜ ಅರಣ್ಯ ಇಲಾಖೆಯ ನೆಲ್ಯಾಡಿ ಶಾಖೆಯ ಹಳೆನೇರಂಕಿ ಗ್ರಾಮದ ಇರಟ್ಟಾಡಿ ಎಂಬಲ್ಲಿ ಮಂಗಳವಾರ ರಾತ್ರಿ ಗಸ್ತುವಿನಲ್ಲಿದ್ದ ಇಲಾಖೆಯವರು ಈ ದಾಳಿ ನಡೆಸಿ ಇದನ್ನು ಪತ್ತೆ ಹಚ್ಚಿದ್ದಾರೆ. ಇದೇ ವೇಳೆ ಲಾರಿಯಲ್ಲಿ ಮತ್ತು ಬೈಕಿನಲ್ಲಿದ್ದ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಲಾರಿಯಲ್ಲಿ 29 ಮರದ ದಿಮ್ಮಿಗಳು ಇದ್ದವು. ವಲಯಾರಣ್ಯಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯಾರಣ್ಯಾಧಿಕಾರಿ ಶಿವಪ್ಪ ಧನದ, ಅರಣ್ಯ ರಕ್ಷಕರಾದ ಭರತೇಶ್, ಅಶೋಕ ಕೆ.ಆರ್, ಸಂತೋಷ್ ಹಾಗೂ ಮೋಹನ್ ಎಂ. ಪಾಲ್ಗೊಂಡಿದ್ದರು. ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮಂಗಳೂರು ವಿಭಾಗ ಉಪ ಅರಣ್ಯಸಂರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement