ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರು. 6 ಲಕ್ಷ ಮೌಲ್ಯದ ನಗ ನಗದು ಕಳವು

Rashmi Kasaragodu
Updated On : 24 Oct 2013, 11:47 am

ಬೆಳ್ತಂಗಡಿ: ವಾಹನಗಳ ಬಿಡಿ ಭಾಗ ಮಾರಾಟ ಅಂಗಡಿಯಿಂದ ಹಾಡಹಗಲೇ ರು. 1 ಲಕ್ಷ ನಗದು ಹಾಗೂ 219 ಗ್ರಾಂ. ಚಿನ್ನಾಭರಣ ಕದ್ದೊಯ್ದ ಘಟನೆ ಉಜಿರೆಯಲ್ಲಿ ಮಂಗಳವಾರ ನಡೆದಿದೆ.
ರು. 1 ಲಕ್ಷ ನಗದು, 4.5 ಗ್ರಾಂ ಲಕ್ಷ್ಮೀ ಸರ, 5 ಪವನ್ ಪೆಡೆಂಟ್ ಸರ, 3 ಪವನ್ ಚೈನ್, 2 ಪವನ್ ನೆಕ್ಲೆಸ್, 10 ಗ್ರಾಂ ನಾಣ್ಯ, 14 ಗ್ರಾಂ ತೂಕದ ಮಕ್ಕಳ 6 ಉಂಗುರ, 24 ಗ್ರಾಂ ತೂಕದ 6 ಉಂಗುರ ಕಳವಾಗಿದೆ. ಒಟ್ಟು ಮೌಲ್ಯ ರು. 6 ಲಕ್ಷ ಎಂದು ಅಂದಾಜಿಸಲಾಗಿದೆ. ಅಪರಿಚಿತ ಇಬ್ಬರು ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಅಂಗಡಿಯ ಮಾಲಕಿ ಅನಿತಾ ಸಂಜೀವ ಶೆಟ್ಟಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಉಜಿರೆಯ ಗಣೇಶ ಕೃಪಾ ಕಲ್ಯಾಣ ಮಂಟಪ ಬಳಿ ಇರುವ ಶ್ರೀಕೃಪಾ ಅಟೋ ಸ್ಪೇರ್ ಪಾರ್ಟ್ಸ್ ಅಂಗಡಿ ಮಾಲಕಿ ಒಂದು ವಾರದ ಹಿಂದೆ ಅಂಗಡಿ ಮುಚ್ಚಿ ತವರು ಮನೆಯಾದ ಚಿತ್ರದುರ್ಗದ ಚಳ್ಳಕರೆಗೆ ಹೋಗಿದ್ದರು.
ಮಂಗಳವಾರ ಮಧ್ಯಾಹ್ನ ಬಂದು ಅಂಗಡಿ ಬಾಗಿಲು ತೆರೆದಿದ್ದರು. ಈ ಸಂದರ್ಭ ಅವರು ಊರಿನಿಂದ ಬರುವಾಗ ಇದ್ದ ರು. 1 ಲಕ್ಷ ನಗದು ಹಾಗೂ ಚಿನ್ನಾಭರಣವನ್ನು ಒಂದು ಸಣ್ಣ ಬ್ಯಾಗ್ನಲ್ಲಿ ಹಾಕಿ ಇಟ್ಟಿದ್ದರು.
 ಇಬ್ಬರು ಅಪರಿಚಿತರು ಮಧ್ಯಾಹ್ನ ಆಗಮಿಸಿ ಕೆಲವೊಂದು ಬಿಡಿಭಾಗಗಳು ಬೇಕೆಂದು ಕೇಳಿದ್ದಲ್ಲದೆ ತಾವು ತಮಗೆ ಬೇಕಾದ ವಸ್ತುಗಳನ್ನು ಹುಡುಕಾಡಲು ಪ್ರಾರಂಭಿಸಿದರು. ಸ್ವಲ್ಪ ಹೊತ್ತು ಅಂಗಡಿಯಲ್ಲಿದ್ದ ಅವರು ಹುಡುಕಾಟ ನಡೆಸಿ ಸ್ವಲ್ಪ ಹೊತ್ತಿನ ನಂತರ ಬರುವುದಾಗಿ ಹೇಳಿ ಹೊರಟರು. ಅವರು ಹೋದ ಬಳಿಕವೇ ಅನಿತಾ ಅವರಿಗೆ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಪೊಲೀಸರ ವಿಚಾರಣೆ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement