ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಚ್ಯುತದಾಸ ನಿಧನಕ್ಕೆಹೆಗ್ಗಡೆ ಸಂತಾಪ

Rashmi Kasaragodu
Updated On : 25 Oct 2013, 11:37 am

ಬೆಳ್ತಂಗಡಿ: ಸಂತ ಭದ್ರಗಿರಿ ಅಚ್ಯುತದಾಸರ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂತ ಭದ್ರಗಿರಿ ಅಚ್ಯುತದಾಸರು ಶತಮಾನ ಕಂಡ ಶ್ರೇಷ್ಠ ವಿದ್ವಾಂಸರಾಗಿದ್ದರು. ಹರಿಕಥೆ ಅಂದರೆ ಕೇವಲ ಕಥಾ ನಿರೂಪಣೆ ಎನ್ನುವ ಭಾವನೆ ಇತ್ತು. ಆದರೆ ಅವರು ತಮ್ಮ ಅಪಾರ ಜ್ಞಾನ ಮತ್ತು ಅನುಭವದಿಂದ ಅನೇಕ ಉದಾಹರಣೆಗಳನ್ನು ನೀಡಿ ಸ್ವಾರಸ್ಯಕರವಾಗಿ ಹರಿಕಥೆ ಮಾಡುತ್ತಿದ್ದರು. ಅನೇಕ ಸಾಧು- ಸಂತರ, ವಿದ್ವಾಂಸರ, ಸಾಹಿತಿಗಳ ತುಣುಕುಗಳನ್ನು ಉದ್ಧರಿಸಿ ಕಥಾ ನಿರೂಪಣೆ ಮಾಡಿ ಅವರು ಶೋತೃಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಹುಭಾಷಾ ಕೋವಿದರಾದ ಅವರ ಅಪಾರ ಸಂಗೀತ ಜ್ಞಾನ ಮತ್ತು ಸುಮಧುರ ಕಂಠ ಸಿರಿಯಿಂದಾಗಿ ಅವರಿಗೆ ಸರಿ ಸಾಟಿಯಾದ ಕೀರ್ತನಕಾರರು ಇಲ್ಲ ಎನ್ನುವ ಮಾತು ಪ್ರಚಲಿತವಾಗಿತ್ತು. ಸರಳ ಜೀವನ ಹಾಗೂ ಉನ್ನತ ಚಿಂತನೆಯೊಂದಿಗೆ ಅವರು ಆದರ್ಶ ಜೀವನ ನಡೆಸಿ ಸಮಾಜದ ಎಲ್ಲ ವರ್ಗದ ಜನರ ಪ್ರೀತಿ-ವಿಸ್ವಾಸಕ್ಕೆ ಪಾತ್ರರಾಗಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅವರು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅವರ ಅಗಲುವಿಕೆಯಿಂದ ಶ್ರೇಷ್ಠ ಹರಿದಾಸ ಪರಂಪರೆಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಡಾ. ಹೆಗ್ಗಡೆ ಹೇಳಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement