ಇಂದು ಚಿತ್ರಕಲೆ ಕಾರ್ಯಾಗಾರ
ಮಂಗಳೂರು: ನಗರದ ಅಳಕೆಯಲ್ಲಿರುವ ಮಹಾಲಸಾ ಚಿತ್ರಕಲಾ ಶಾಲೆಯಲ್ಲಿ 'ಬಸೋಲಿ' ನವಮಾರ್ಗ ಶೈಲಿಯ ಚಿಕಣಿ ಚಿತ್ರಕಲೆ ಕಾರ್ಯಾಗಾರ ಅ.25ರಂದು ನಡೆಯಲಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಲಾ ಪ್ರಾಚಾರ್ಯ ಪುರುಷೋತ್ತಮ ನಾಯಕ, ಬೆಳಗ್ಗೆ 11ಕ್ಕೆ ದಿ ಫೈನಲ್ ಟಚ್ ಆರ್ಟ್ ಗ್ಯಾಲರಿ ಪಾಲುದಾರರಾದ ಪ್ರಭಾ ಕಾಮತ್ ಉದ್ಘಾಟಿಸಲಿದ್ದು, ಪುತ್ತೂರು ಫಿಲೋಮಿನಾ ಹೈಸ್ಕೂಲ್ ಚಿತ್ರಕಲಾ ಶಿಕ್ಷಕ ಎಂ.ಎಸ್.ಪುರುಷೋತ್ತಮ ಆಗಮಿಸುವರು. ಖ್ಯಾತ ಚಿತ್ರಕಲಾವಿದ ಕಮಲ್ ಅಹಮದ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. 23 ಮಂದಿ ವಿದ್ಯಾರ್ಥಿಗಳು ಭಾಗವಹಿಸಿ ಕಲಾಕೃತಿ ರಚಿಸಲಿದ್ದಾರೆ ಎಂದರು.