ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಲ್ಪೆ: ಬುಲ್ಟ್ರಾಲ್ ಮೀನುಗಾರಿಕೆ ವಿರೋಧಿ ಪ್ರತಿಭಟನೆ 7ನೇ ದಿನಕ್ಕೆ

Rashmi Kasaragodu
Updated On : 25 Oct 2013, 11:38 am

ಪರ್ಸಿನ್ ಬೋಟು ಮೀನುಗಾರರಿಂದ ವಿರೋಧ
ಉಡುಪಿ: ಅರಬ್ಬಿ ಸಮುದ್ರದಲ್ಲಿ ಕೆಲವು ಮೀನುಗಾರರು ಬುಲ್ಟ್ರಾಲ್ ಮೀನುಗಾರಿಕೆ ನಡೆಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನಾರ್ಥಕವಾಗಿ ಪರ್ಸಿನ್ ಬೋಟು ಮೀನುಗಾರರು ಮೀನುಗಾರಿಕೆ ಸ್ಥಗಿತಗೊಳಿಸಿದ್ದು, ಪ್ರತಿಭಟನೆ ಮಲ್ಪೆಯಲ್ಲಿ 7ನೇ ದಿನಕ್ಕೆ ಕಾಲಿಟ್ಟಿದೆ.
ಕಳೆದ ಸೋಮವಾರ ಪರ್ಸೀನ್ ಬೋಟು ಮೀನುಗಾರರ ನಿಯೋಗ ಶಾಸಕ ಪ್ರಮೋದ್ ಮಧ್ವರಾಜ್, ಸಂಸದ ಜಯಪ್ರಕಾಶ ಹೆಗ್ಡೆ, ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆಗೆ ಬುಲ್ಲ್ಟ್ರಾಲ್ ಮೀನುಗಾರಿಕೆ ನಿಷೇಧಿಸಿ ತಮ್ಮನ್ನು ರಕ್ಷಿಸುವಂತೆ ಮನವಿ ಸಲ್ಲಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಸೊರಕೆ, ಈ ಬಗ್ಗೆ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್  ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಆದರೆ ಬುಲ್ಲ್ಟ್ರಾಲ್ ಮೀನುಗಾರಿಕೆ ಮುಂದುವರಿದಿರುವುದರಿಂದ ಪರ್ಸೀನ್ ಬೋಟು ಮೀನುಗಾರರು ಬೇರೆ ದಾರಿ ಕಾಣದೆ ಮೀನುಗಾರಿಕೆಗೆ ತೆರಳದೆ, ತಮ್ಮ ಬೋಟುಗಳನ್ನು ಬಂದರಿನಲ್ಲಿ ಲಂಗರು ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.
 
ಬುಲ್ಟ್ರಾಲ್ ಮೀನುಗಾರಿಕೆ ಎಂದರೆ...
ಎರಡು ದೊಡ್ಡ ಬೋಟುಗಳ ನಡುವೆ ಒಂದು ಭಾರಿ ಬಲೆ ಕಟ್ಟಿ ಎಲ್ಲಾ ರೀತಿಯ ಮೀನುಗಳನ್ನು ಹಿಡಿಯುವುದನ್ನು ಬುಲ್ ಟ್ರಾಲ್ ಮೀನುಗಾರಿಕೆ ಎನ್ನಲಾಗುತ್ತದೆ. ಈ ಭಾರಿ ಬಲೆಯಲ್ಲಿ ಎಲ್ಲಾ ಜಾತಿಯ ಚಿಕ್ಕ ದೊಡ್ಡ ಮೀನುಗಳು ಸಿಕ್ಕಿ ಹಾಕಿಕೊಳ್ಳುತ್ತವೆ, ಮುಖ್ಯವಾಗಿ ಭಾರಿ ಪ್ರಮಾಣದಲ್ಲಿ ಮೀನು ಮರಿಗಳು ಕೂಡ ಈ ಬಲೆಗೆ ಬಿದ್ದು ಸಾಯುತ್ತವೆ. ಇದರಿಂದ ಮುಂದಿನ ದಿನಗಳಲ್ಲಿ ಮತ್ಸ್ಯಕ್ಷಾಮ ತಲದೋರಲಿದೆ.
ಅಲ್ಲದೆ, ಇದುವರೆಗೆ ಸಮುದ್ರದ ಮಧ್ಯದಲ್ಲಿ ನಡೆಯುತ್ತಿದ್ದ ಬುಲ್ಲ್ಟ್ರಾಲ್ ಮೀನುಗಾರಿಕೆ ಇತ್ತೀಚೆಗೆ 12 ನಾಟಿಕಲ್ ಮೈಲಿಯೊಳಗೂ ನಡೆಯುತ್ತಿದೆ. ಇದರಿಂದ ಇಲ್ಲಿ ಮೀನುಗಾರಿಕೆ ನಡೆಸುತ್ತಿರುವ ಪರ್ಸಿನ್ (ಚಿಕ್ಕ, ಯಾಂತ್ರಿಕ) ಬೋಟುಗಳಿಗೆ ಮೀನು ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement