ಸಿಡಿಲು ಹೊಡೆದು ಯುವಕ ಅಸ್ವಸ್ಥ
ಬೆಳ್ತಂಗಡಿ: ತಾಲೂಕಿನ ಸುದೇಮುಗೇರು ಎಂಬಲ್ಲಿನ ರಮೇಶ್ ಎಂಬವರಿಗೆ ಗುರುವಾರ ಸಂಜೆ ಸಿಡಿಲು ಹೊಡೆದು ಕಾಲು ನಿಶ್ಚಲಗೊಂಡಿದೆ. ಅವರು ಬೆಳ್ತಂಗಡಿಯ ಮೂರುಮಾರ್ಗದ ಬಳಿ ಇದ್ದಾಗ ಈ ಘಟನೆ ಸಂಭವಿಸಿದೆ. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದೆಡೆ ಮುಗುಳಿ ಎಂಬಲ್ಲಿನ ಬಾಬು ಎಂಬವರ ಮನೆಗೆ ಸಿಡಿಲು ಹೊಡೆದು ಮನೆ ಬಿರುಕು ಬಿಟ್ಟಿದೆ. ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಪಟ್ಟಣದಲ್ಲಿ ದೂರವಾಣಿ ಸಂಪರ್ಕ ಅಸ್ತವ್ಯಸ್ತಗೊಂಡಿದೆ.