ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹೋಂಗಾರ್ಡ್ಸ್ ಅಧಿಕಾರಿ ಅಧಿಕಾರಾವಧಿ ವಿಸ್ತರಣೆ ಸರ್ಕಾರಕ್ಕೆ ಬಿಟ್ಟಿದ್ದು: ಹೈಕೋರ್ಟ್

Rashmi Kasaragodu
Updated On : 25 Oct 2013, 11:37 am

ಬೆಂಗಳೂರು: ಹೋಂಗಾರ್ಡ್ಸ್ ವಿಭಾಗದ ಕಮಾಂಡರ್ ಜನರಲ್ ಹುದ್ದೆಯ ಅಧಿಕಾರಾವಧಿ ವಿಸ್ತರಣೆ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ತಮ್ಮ ಅವಧಿ ವಿಸ್ತರಣೆ ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಹೋಂಗಾರ್ಡ್ಸ್ನ ಕಮಾಂಡರ್ ಜನರಲ್ ಡಾ. ನಿದರ್ಶನ್ ಹೆಗ್ಡೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಎಚ್.ಜಿ.ರಮೇಶ್ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. ತಾವು 2008ರ ಸೆಪ್ಟೆಂಬರ್ 17ರಂದು ದಕ್ಷಿಣ ಕನ್ನಡ ಜಿಲ್ಲೆಯ ಹೋಂಗಾರ್ಡ್ಸ್ನ ಕಮಾಂಡರ್ ಜನರಲ್ ಆಗಿ ನೇಮಕಗೊಂಡಿದ್ದು, 2013ಕ್ಕೆ ಐದು ವರ್ಷಗಳ ಅವಧಿ ಪೂರ್ಣಗೊಂಡಿದೆ. ಆದರೆ, ತಾವು ಇಲ್ಲಿಯವರೆಗೆ ಉತ್ತಮ ಸೇವೆ ಸಲ್ಲಿಸಿದ್ದು, ತಮ್ಮ ಸೇವೆಯನ್ನು ಮುಂದುವರಿಸಬೇಕು ಎಂದು ನಿದರ್ಶನ್ ಹೆಗ್ಡೆ ಕೋರಿದ್ದರು. ಆದರೆ, ಹೋಂಗಾಡ್ಸ್ ಸೇರಿದಂತೆ ಇತರ ವಿಭಾಗಗಳ ಅಧಿಕಾರಿಗಳ ಅವಧಿಯ ವಿಸ್ತರಣೆ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು. ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ, ಅರ್ಜಿಯನ್ನು ವಜಾಗೊಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement