ಕಾರಿನ ವಾರಸುದಾರ ಪತ್ತೆ
ಮೂಲ್ಕಿ: ಕಿನ್ನಿಗೋಳಿ- ದಾಮಸ್ ಕಟ್ಟೆ ರಸ್ತೆಯಲ್ಲಿನ ಎಸ್‌ವಿಡಿ ಬಳಿ ಮನೆಯ ಕಾಂಪೌಂಡ್ ಎದುರುಗಡೆ ಕಳೆದ ಕೆಲವು ದಿನಗಳಿಂದ ಅನಾಥ ಸ್ಥಿತಿಯಲ್ಲಿದ್ದ ಕಾರಿನ ವಾರಸುದಾರ ಪತ್ತೆಯಾಗಿದ್ದಾರೆ. ಕೆಲವು ದಿನಗಳಿಂದ ಅನಾಥ ಸ್ಥಿತಿಯಲ್ಲಿದ್ದ ಕಾರಿನ ಬಗ್ಗೆ ಜನರಲ್ಲಿ ಕುತೂಹಲ ಮೂಡಿದ್ದು, ಗುರುವಾರ ಈ ಬಗ್ಗೆ ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಬಳಿಕ ಪೊಲೀಸರು ಕಾರನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ ಕಟೀಲಿನ ಉದ್ಯಮಿ ಜನಾನಂದ ಶೆಟಿಯವರು ಇತ್ತೀಚೆಗೆ ಏಳಿಂಜೆಯ ದೇವಳದಲ್ಲಿನ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಹಿಂದಕ್ಕೆ ಹೋಗುವ ಸಂದರ್ಭದಲ್ಲಿ ಕಾರು ಹಾಳಾಗಿರುವುದರಿಂದ ರಸ್ತೆಯ ಬದಿಯಲ್ಲಿನ ಮನೆಯ ಕಾಂಪೌಂಡ್ ಎದುರು ನಿಲ್ಲಿಸಿರುವುದಾಗಿ ತಿಳಿಸಿದ್ದಾರೆ. ದಾಖಲೆ ಪತ್ರ ನೀಡಿ, ವಾಹನವನ್ನು ಕೊಂಡೊಯ್ದಿದ್ದಾರೆ ಎನ್ನಲಾಗಿದೆ.