ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಟ್ಕಾ ಜುಗಾರಿ: ಓರ್ವ ಬಂಧನ

Rashmi Kasaragodu
Updated On : 26 Oct 2013, 11:32 am

ಕೋಟ: ಇಲ್ಲಿನ ಶಿರಿಯಾರ ಗ್ರಾಮದ ಸಾಯ್ಬ್ರಕಟ್ಟೆಯ ಬಾರೊಂದರ ಎದುರು ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆರೋಪಿ ಶೇಖರ ಮರಕಾಲ ಇವರು ಸಾರ್ವಜನಿಕರಿಂದ ಹಣವನ್ನು ಪಣವಾಗಿರಿಸಿಕೊಂಡು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಕೋಟ ಠಾಣೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆಟಕ್ಕೆ ಬಳಸಿದ ರು. 730  ನಗದು ಹಾಗೂ ಇನ್ನಿತರ ಪರಿಕರಗಳನ್ನು ವಶಪಡಿಸಿಕೊಂಡಿದಾರೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಗಳ ತಪ್ಪಿಸಲು ಹೋದವನ ಮೇಲೆ ಹಲ್ಲೆ
ಉಡುಪಿ: ಮೆಮೋರಿ ಕಾರ್ಡ್ ವಿಷಯಕ್ಕೆ ಜಗಳವಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಜಗಳ ತಪ್ಪಿಸಲು ಹೋದವರಿಗೆ ಹಲ್ಲೆ ನಡೆಸಿದ ಪ್ರಕರಣ ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ಗುರುವಾರ ನಡದಿದೆ. ಸುನೀಲ್ ಕುಮಾರ್ ಮತ್ತು ಅವರ ಸ್ನೇಹಿತ ರಾಘವೇಂದ್ರ ದಾಸ್ ಇವರು ರಸ್ತೆಯಲ್ಲಿ ನಿಂತಿದ್ದ ಸಂದರ್ಭದಲ್ಲಿ ಪರಿಚಯದವರಾದ ಸನ್‌ರಾಜ್ ಬಾಳಿಗ ಮತ್ತು ಯೂಸುಪ್ ಯಾನೆ ಮುನ್ನಾ ಎಂಬವರು ಮೆಮೊರಿ ಕಾರ್ಡ್ ವಿಷಯದಲ್ಲಿ ಜಗಳವಾಡುತ್ತಿದ್ದರು. ಅದನ್ನು ತಪ್ಪಿಸಲು ಹೋದ ಸುನೀಲ್‌ಗೆ ಸನ್‌ರಾಜ್ ಬಾಳಿಗನು ಖಾಲಿ ಬಿಯರ್ ಬಾಟಲಿಯಲ್ಲಿ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಈ ನಡುವೆ ಯೂಸುಫ್ ಕೂಡ ಸುನಿಲ್ ಕುಮಾರ್ ಅವರಿಗೆ ಕಾಲಿನಿಂದ ತುಳಿದು ಪೊಲೀಸ್‌ರಿಗೆ ದೂರು ನೀಡಿದರೆ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿದ್ದಾರೆ. ಈ ಬಗ್ಗೆ ಸುನೀಲ್ ಕುಮಾರ್ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಅಪಘಾತ: ಸ್ಕೂಟರ್ ಸವಾರ ಗಂಭೀರ


ಉಪ್ಪಿನಂಗಡಿ; ಇಲ್ಲಿನ ಸಮೀಪದ 34 ನೇ ನೆಕ್ಕಿಲಾಡಿಯ ಬೊಳ್ಳಾರ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟ್ಯಾಂಕರ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ. ಮಂಗಳೂರು ಕಡೆಯಿಂದ ಅಡುಗೆ ಅನಿಲ ಹೇರಿಕೊಂಡು ಬರುತ್ತಿದ್ದ ಟ್ಯಾಂಕರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ, ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ನೆಲ್ಲಿಪಲ್ಕೆ ನಿವಾಸಿ ಅಬೂಬಕ್ಕರ್(40) ಗಂಭೀರ ಗಾಯಗೊಂಡು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಕೂಟರ್ ಸವಾರ ಅಬೂಬಕ್ಕರ್ ವೃತ್ತಿಯಲ್ಲಿ ಕೃಷಿಕನಾಗಿದ್ದು, ಮನೆಯಲ್ಲಿ ಹಸುಗಳ ಹಾಲು ಕರೆಯುವ ಸಲುವಾಗಿ ಧಾವಂತದಲ್ಲಿ ಸಾಗುತ್ತಿದ್ದಾಗ ಟ್ಯಾಂಕರ್ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಟ್ಯಾಂಕರ್‌ನಡಿಗೆ ಸಿಲುಕಿದ ಸ್ಕೂಟರನ್ನು ಹೊರತೆಗೆಯಲು ಸ್ಥಳೀಯ ಯುವಕರ ತಂಡ ಬಹಳಷ್ಟು ಶ್ರಮಿಸಿದರು. ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿ, ಹೆದ್ದಾರಿ ಸಂಚಾರ ಸುಗಮಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement