ಅಧಿಕಾರ ಸ್ವೀಕಾರ
ಮಂಗಳೂರು: ಜಿಲ್ಲಾ ಹೆಚ್ಚುವರಿ ಎಸ್ಪಿ ಟಿ.ಪಿ. ಶಿವಕುಮಾರ್ ಅವರು ಹೋಂ ಗಾರ್ಡ್ಸ ಕಚೇರಿಯಲ್ಲಿ ಮಂಗಳೂರು ಜಿಲ್ಲಾ ಗೃಹ ರಕ್ಷಕದಳದ ಪ್ರಭಾರ ಕಮಾಂಡೆಂಟ್ ಆಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ.
ಚೊಚ್ಚಲ ಕೃತಿಗೆ ಪ್ರೋತ್ಸಾಹಧನ ಅರ್ಜಿ ಆಹ್ವಾನ
ಮಂಗಳೂರು: 2012 ನೇ ಸಾಲಿನ ಯುವ ಬರಹಗಾರರು ಕನ್ನಡ ಸಾಹಿತ್ಯದಲ್ಲಿ ರಚಿಸಿರುವ ಚೊಚ್ಚಲ ಕೃತಿ ಹಾಗೂ ಅನುವಾದ, ಪಠ್ಯಪುಸ್ತಕ, ಕಥೆ, ಕವನ, ನಾಟಕ ಮುಂತಾದ ಸಾಹಿತ್ಯ ಪ್ರಕಾರಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಚೊಚ್ಚಲ ಕೃತಿಯ ಬೆರಳಚ್ಚು, ಡಿಟಿಪಿ ಮಾಡಿಸಿ, ತಮ್ಮ ಸ್ವವಿವರಗಳೊಂದಿಗೆ ಅರ್ಜಿ ಕಳುಹಿಸಬಹುದು. ನ.
22 ಕೊನೆ ದಿನ. ಅರ್ಜಿಯನ್ನು ಆಡಳಿತಾಧಿಕಾರಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆಸಿ ರಸ್ತೆ, ಬೆಂಗಳೂರು-2 ಇಲ್ಲಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 080-22484516 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.