ಇಂದು ಕೆಸರುಗದ್ದೆ ಕ್ರೀಡೋತ್ಸವ
ಮೂಲ್ಕಿ: ಇಲ್ಲಿನ ಸಮೀಪದ ಅತಿಕಾರಿಬೆಟ್ಟುವಿನ ಹಳೆ ವಿದ್ಯಾರ್ಥಿ ಸಂಘದ ಅಶ್ರಯದಲ್ಲಿ ವಾರ್ಷಿಕೋತ್ಸವದ ಅಂಗವಾಗಿ 27ರಂದು ಭಾನುವಾರ ಬೆಳಗ್ಗೆ ಸಾರ್ವಜನಿಕರಿಗೆ ಕೆಸರುಗದ್ದೆ ಕ್ರೀಡೋತ್ಸವವು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಸಮೀಪ ನಡೆಯಲಿದೆ ಎಂದು ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ ತಿಳಿಸಿದ್ದಾರೆ.
ಕೇಂದ್ರ ಸಚಿವ ವೀರಪ್ಪ ಮೈಲಿ ಪ್ರವಾಸ ರದ್ದು
ಮಂಗಳೂರು: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಡಾ.ಎಂ.ವೀರಪ್ಪ ಮೈಲಿಯವರ ಅ. 27 ಜಿಲ್ಲಾ ಪ್ರವಾಸ ಕಾರಣಾಂತರಗಳಿಂದ ರದ್ದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಈಜು ಸ್ಪರ್ಧೆ
ಮಂಗಳೂರು: ಲಯನ್ಸ್ ಅಂತಾರಾಷ್ಟ್ರೀಯ ಜಿಲ್ಲೆ 317ಡಿ, ಮಂಗಳಾ ಸ್ವಿಮ್ಮಿಂಗ್ ಕ್ಲಬ್ ಆಶ್ರಯದಲ್ಲಿ ನಗರದ ಲೇಡಿಹಿಲ್ನ ಮಹಾನಗರ ಪಾಲಿಕೆ ಈಜುಕೊಳದಲ್ಲಿ ಅ.27ರಂದು ದಿ.ಕೆ.ವಿ.ಪ್ರಭು ಸ್ಮಾರಕ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಆಯೋಜಿಸಲಾಗಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಾಜ್ಯಪಾಲ ಕೆ.ಸಿ.ಪ್ರಭು, ಬೆಳಗ್ಗೆ 9ಕ್ಕೆ ಉದ್ಘಾಟನೆಯಾಗಲಿದ್ದು, ಮಹಾನಗರ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಯಶವಂತ ಕಾಮತ್, ಉದ್ಯಮಿ ಅನಂತೇಶ ಪ್ರಭು ಅತಿಥಿಯಾಗಿ ಆಗಮಿಸುವರು. ಸಹ ಸಂಯೋಜಕ ಎ.ಜಿ.ಶರ್ಮಾ ಅಧ್ಯಕ್ಷತೆ ವಹಿಸುವರು ಎಂದರು