ನ. 3ರಂದು ದೀಪಾವಳಿ ಕ್ರೀಡಾಕೂಟ, ಸಾಮೂಹಿಕ ಗೋ ಪೂಜೆ
ಉಪ್ಪಿನಂಗಡಿ: ಕೈಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀ ರಾಮ ಗೆಳೆಯರ ಬಳಗದ ವತಿಯಿಂದ ದೀಪಾವಳಿ ಕ್ರೀಡಾಕೂಟ ಹಾಗೂ ಸಾಮೂಹಿಕ ಗೋ ಪೂಜೆ ಕಾರ್ಯಕ್ರಮ ಸಬಳೂರಿನ ಅಯೋಧ್ಯಾ ನಗರದಲ್ಲಿ ನ. 3 ರಂದು ನಡೆಯಲಿದೆ. ಬೆಳಗ್ಗೆ ಸಾಮೂಹಿಕ ಗೋ ಪೂಜೆ, ಬಳಿಕ ನಡೆಯುವ ಕ್ರೀಡಾಕೂಟದ ಉದ್ಘಾಟನೆಯನ್ನು ನೋಟರಿ ನ್ಯಾಯವಾದಿ ಮನೋಹರ ಸಬಳೂರು ನೇರವೇರಿಸಲಿದ್ದಾರೆ. ಸಬಳೂರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಾರಿಜಾ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ನಡೆಯುವ ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ವಹಿಸಲಿದ್ದಾರೆ. ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಧಾರ್ಮಿಕ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಪ್ರಯುಕ್ತ 27 ರಂದು ಪುರುಷರಿಗೆ ವಾಲಿಬಾಲ್ ಮತ್ತು ಗುಡ್ಡಗಾಡು ಓಟ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.