ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪಾದಚಾರಿಗೆ ಬೈಕ್ ಡಿಕ್ಕಿ: ಬೈಕ್ ಸವಾರನಿಗೆ ಚೂರಿಯಿಂದ ಇರಿತ

Rashmi Kasaragodu
Updated On : 27 Oct 2013, 2:13 am

ಬಂಟ್ವಾಳ: ಬೈಕೊಂದು ಪಾದಚಾರಿ ಹುಡುಗಿಯೊಬ್ಬಳಿಗೆ ಶುಕ್ರವಾರ ಸಂಜೆ ಡಿಕ್ಕಿ ಹೊಡೆದ ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಸಮುದಾಯದ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದು ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾದ ಘಟನೆಗೆ ಸಂಬಂಧಿಸಿದಂತೆ ರಾತ್ರಿ ಸುಮಾರು 11.30ರ ಹೊತ್ತಿಗೆ ಬಿ.ಸಿ. ರೋಡ್ ಸಮೀಪದ ಕೈಕಂಬ ಎಲ್.ಐ.ಸಿ ಕಚೇರಿ ಬಳಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿಯಲಾಗಿದೆ. ಮಾರಿಪಲ್ಲದ ರಶೀದ್ ಎಂಬವರು ಹಲ್ಲೆಯಿಂದ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರಿಪಲ್ಲದ ಹಮೀದ್ ಯಾನೆ ಹಮ್ಮಿ ಎಂಬಾತ ಈ ಕೃತ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈತ ಹಲವು ಪ್ರಕರಣದಲ್ಲಿ ಶಾಮೀಲಾಗಿದ್ದು, ರೌಡಿ ಶೀಟರ್ ಕೂಡಾ ಆಗಿದ್ದಾನೆ ಎನ್ನಲಾಗಿದೆ. ಕೈಕಂಬ ಜಂಕ್ಷನ್ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ರಶೀದ್ ಬೈಕ್ ಚಲಾಯಿಸಿಕೊಂಡು ಹೋಗುವಾಗ ಡಿಕ್ಕಿ ಹೊಡೆದಿದ್ದು, ಆಕೆ ಗಾಯಗೊಂಡಿದ್ದಳು. ಆತ ಗಾಯಾಳು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದನಾದರೂ ಸ್ಥಳೀಯ ಯುವಕರ ಗುಂಪೊಂದು ಆತನಿಗೆ ಹಲ್ಲೆಗೆ ಮುಂದಾಗಿತ್ತು. ಈ ಸಂದರ್ಭ ಸ್ಥಳದಲ್ಲಿ ಕೆಲಕಾಲ ಆತಂಕ ಪರಿಸ್ಥಿತಿ ತಲೆದೋರಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಿ ಪ್ರಕರಣವನ್ನು ತಿಳಿಗೊಳಿಸಿದ್ದರು. ರಾತ್ರಿ ವೇಳೆ ರಶೀದ್ ಮನೆಗೆ ತೆರಳುತ್ತಿದ್ದಾಗ ಆತನನ್ನು ಅಡ್ಡಗಟ್ಟಿ ಚೂರಿಯಿಂದ ಇರಿಯಲಾಗಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.


1 ಕೋಟಿ ಚಿನ್ನ ಕಳ್ಳ ಸಾಗಾಟ ಪತ್ತೆ
ಮಂಗಳೂರು: ಚಿನ್ನ ಕಳ್ಳಸಾಗಾಟಕ್ಕೆ ಯತ್ನಿಸುತ್ತಿದ್ದ ವಿಮಾನ ಪ್ರಯಾಣಿಕನನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು 457 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ. ಮೌಲ್ಯ 14.62 ಲಕ್ಷ ಅಂದಾಜಿಸಿದ್ದಾರೆ.
ಕಸ್ಟಮ್ಸ್ ಅಧಿಕಾರಿಗಳು ಬಜ್ಪೆ ವಿಮಾನದಲ್ಲಿ ಸತತ ಮೂರನೇ ದಿನ ಚಿನ್ನ ಕಳ್ಳ ಸಾಗಾಟ ಪತ್ತೆ ಹಚ್ಚಿದ್ದಾರೆ. ಕಾಸರಗೋಡು ಹಿದಾಯತ್ ನಗರದ ಮೊಹಮ್ಮದ್ ಅಶ್ರಫ್ ಬಂಧಿತ. ಲಗೇಜ್ನಲ್ಲಿ ಚಿನ್ನ ಅವಿತಿರಿಸಿ ದುಬೈಯಿಂದ ಏರ್ಇಂಡಿಯಾ ವಿಮಾನದಲ್ಲಿ ಮಂಗಳೂರಿಗೆ ತರುತ್ತಿದ್ದ ಎಂದು ಕಸ್ಟಮ್ಸ್ ಎಸ್ಪಿ ಪಿ.ಎ. ಮೊಹಮ್ಮದ್ ತಿಳಿಸಿದ್ದಾರೆ. ಶುಕ್ರವಾರ ಇದೇ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕ ಮಡಿಕೇರಿ ಭಾಗಮಂಗಲ ನಿವಾಸಿ ಬಶೀರ್ ಯಾನೆ ಇಬ್ರಾಹಿಂನನ್ನು ಬಂಧಿಸಿ 85.5 ಲಕ್ಷ ಮೌಲ್ಯದ 2.5 ಕಿಲೊ ಬಂಗಾರ ವಶಪಡಿಸಿಕೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement