ಮಹಿಳೆ ಆತ್ಮಹತ್ಯೆ
ಕಾರ್ಕಳ: ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆಯೊಬ್ಬರು ಹಾರ್ಪಿಕ್ ದ್ರಾವಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಸಾಣೂರು ಗ್ರಾಮದ ಮದ್ರೊಟ್ಟು ಎಂಬಲ್ಲಿ ಶುಕ್ರವಾರ ನಡೆದಿದೆ. ಮೃತರು ಶಾರದ ಶೆಡ್ತಿ (80). ಇವರು ಮೈ ಉರಿ ಕಾಯಿಲೆಯಿಂದ ಬಳಲುತ್ತಿದ್ದು, ಇದೇ ಕಾರಣಕ್ಕೆ ಮನನೊಂದು ಹಾರ್ಪಿಕ್ ದ್ರಾವಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪ್ರಣಾಮ್ ಶೆಟ್ಟಿ ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನದ ಸರ ಎಳೆದು ಪರಾರಿ
ಉಡುಪಿ: ನಿಟ್ಟೂರು ವಿಷ್ಣುಮೂರ್ತಿ ದೇವಸ್ಥಾನದ ಹತ್ತಿರವಿರುವ ಬಬ್ಬುಸ್ವಾಮಿ ದೇವಸ್ಥಾನದ ಜಂಕ್ಷನ್ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯ್ಲಲಿದ್ದ ಚಿನ್ನದ ಕರಿಮಣಿ ಸರವನ್ನು ಕಳ್ಳರು ಅಪಹರಿಸಿದ ಘಟನೆ ಶನಿವಾರ ನಡೆದಿದೆ. ಪುತ್ತೂರು ಗ್ರಾಮದ ಬೇಬಿ ಎಂಬವರು ಬಬ್ಬುಸ್ವಾಮಿ ದೇವಸ್ಥಾನದ ಜಂಕ್ಷನ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಕುತ್ತಿಗೆಗೆ ಕೈ ಹಾಕಿ ಬಲತ್ಕಾರವಾಗಿ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಎಳೆದುಕೊಂಡು ಹೋಗಿರುತ್ತಾರೆ. ಕರಿಮಣಿ ಸರದ ಮೊತ್ತ ರು. 70 ಸಾವಿರ ಎಂದು ಬೇಬಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬ ಶಾಂತ ಎಂಬವರಲ್ಲಿ ವಿಳಾಸ ಕೇಳುವ ನೆಪದಲ್ಲಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು ಹೋದ ಘಟನೆ ಶನಿವಾರ ಇಲ್ಲಿನ ಆಚಾರ್ಯ ಮಾರ್ಗದ ಮಥುರಾ ಛಾತ್ರದ ಸಮೀಪ ನಡೆದಿದೆ. ಕೃಷ್ಣ ಮಠಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ವಾಪಾಸ್ ಮನೆಯತ್ತ ಬರುತ್ತಿದ್ದ ಶಾಂತ ಎಂಬವರ ಬಳಿ ಅಪರಿಚಿತ ವ್ಯಕ್ತಿಯೋರ್ವ ಬಂದು ಸುರೇಶ ಎಂಬವರ ಮನೆಯೆಲ್ಲಿ ಎಂದು ವಿಚಾರಿಸುವ ನೆಪದಲ್ಲಿ ಶಾಂತ ಅವರ ಕುತ್ತಿಗೆಗೆ ಕೈ ಹಾಕಿ ಸುಮಾರು ರು. 50 ಸಾವಿರ ಮೌಲ್ಯದ ಚಿನ್ನದ ಸರವನ್ನು ಅಪಹರಿಸಿದ್ದಾನೆ. ಈ ಬಗ್ಗೆ ಶಾಂತ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ: ಬೈಕ್ ಸವಾರನಿಗೆ ಗಾಯ
ಉಡುಪಿ: ಕಾರು-ಬೈಕ್ ಡಿಕ್ಕಿ ಹೊಡೆದು ಬೈಕ್ ಸಹಸವಾರ ಗಾಯಗೊಂಡ ಘಟನೆ ಇಲ್ಲಿನ ಡಯಾನ ಸರ್ಕಲ್ ಬಳಿ ಶುಕ್ರವಾರ ನಡೆದಿದೆ. ಗಾಯಗೊಂಡವರನ್ನು ಗಣಪತಿ ಸಿ. ನಾಯಕ್ ಎಂದು ಗುರುತಿಸಲಾಗಿದೆ. ಸಿ. ಉದಯ ಕುಮಾರ್ ಎಂಬವರು ಗಣಪತಿ ಸಿ. ನಾಯಕ್ ಅವರೊಂದಿಗೆ ಬೈಕಿನಲ್ಲಿ ಹೋಗುತ್ತಿರುವ ವೇಳೆ ಕಾರು ಚಾಲಕ ಆರಿಫ್ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕ ನಾಪತ್ತೆ
ಮಂಗಳೂರು: ಹರಿಪದವು ಕೊಂಚಾಡಿ 10 ವರ್ಷ ಬಾಲಕ ಶುಕ್ರವಾರದಿಂದ ನಾಪತ್ತೆಯಾಗಿದ್ದಾನೆ. ಬಿಜೈಲೂರ್ಡ್ಸ್ ಸ್ಕೂಲ್ನ 5ನೇ ತರಗತಿ ವಿದ್ಯಾರ್ಥಿ ಅರಾನ್ ಕಾಣೆಯಾದ ಬಾಲಕ.ಲಯನೆಲ್ ನರೋನ್ಹಾ ಕಾವೂರು ಪೊಲೀಸರಿಗೆ ದೂರು ನೀಡಿದ್ದಾರೆ.