ವಾರಸುದಾರರು ಸಂಪರ್ಕಿಸಿ
ಮಂಗಳೂರು: ವೆನ್ಲಾಕ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಅನಾಥ ಶವಗಳಿದ್ದು, ಸಂಬಂಧಪಟ್ಟ ವಾರೀಸುದಾರರು ಮೂರು ದಿನದೊಳಗೆ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಆಸ್ಪತ್ರೆಯ ವೈದ್ಯಾಧಿಕಾರಿ ಹೇಳಿದ್ದಾರೆ. ಮಂಗಳೂರು ಕಾರ್ಸ್ಪ್ರೀಟ್ ನಿವಾಸಿ ರಾಜೇಶ್(42) ಅ. 6 ರಂದು ಒಳರೋಗಿಯಾಗಿ ದಾಖಲಾಗಿದ್ದು, ಅ. 17 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಸೆ. 17 ರಂದು ಅಂಬ್ಯುಲೆನ್ಸ್ ಮೂಲಕ ದಾಖಲು ಮಾಡಿದ ಬೇಬಿ(35) ಅವರು ಅ. 14 ರಂದು ಮರಣ ಹೊಂದಿರುತ್ತಾರೆ. ಸಕಲೇಶಪುರದ ಮೊಹಮ್ಮದ್ ಮಜೀದ್(55) ಸೆ. 28 ರಂದು ಒಳರೋಗಿಯಾಗಿ ದಾಖಲಾಗಿದ್ದು, ಅ. 16 ರಂದು ಮೃತಪಟ್ಟಿರುತ್ತಾರೆ. ಮೃತ ಶರೀರದ ವಾರೀಸುದಾರರಿಲ್ಲದೆ ಶವವನ್ನು ವಿಲೇವಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟವರು ಸಂಪರ್ಕಿಸುವಂತೆ ಜಿಲ್ಲಾಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.