ಇಂದು ವಿವಿಧೆಡೆ ವಿದ್ಯುತ್ ಸ್ಥಗಿತ
ಮಂಗಳೂರು: 33 ಕೆವಿ ಕುಂದಾಪುರ- ತಲ್ಲೂರು- ಬೈಂದೂರು ವಿದ್ಯುತ್ ಮಾರ್ಗದಲ್ಲಿ ಪಾಲನಾ ಮತ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.30ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ನಿಲುಗಡೆ ಪ್ರದೇಶಗಳು: ಶಿರೂರು, ಬೈಂದೂರು, ಗೋಳಿಹೊಳೆ, ಕೊಲ್ಲೂರು, ಉಪ್ಪುಂದ, ಕೆರ್ಗಲ್, ತ್ರಾಸಿ, ಗಂಗೊಳ್ಳಿ, ಹೆಮ್ಮಾಡಿ, ಹಟ್ಟಿಯಂಗಡಿ, ಗುಲ್ವಾಡಿ, ಕರ್ಕುಂಜೆ, ಕೆರಾಡಿ, ವಂಡ್ಸೆ, ಬೆಳ್ಳಾಲ, ಚಿತ್ತೂರು, ಬಾಂಡ್ಯ, ನೇರಳಕಟ್ಟೆ, ಜಡ್ಕಲ್ ಸುತ್ತಮುತ್ತಲಿನ ಗ್ರಾಮಗಳು.
ಇಂದು ವಿದ್ಯುತ್
ನಿಲುಗಡೆ
ಮಂಗಳೂರು: 110/33/11 ಕೆವಿ ಹಿರಿಯಡ್ಕ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.30ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ 110 ಕೆವಿ ವಿದ್ಯುತ್ ಉಪಕೇಂದ್ರಗಳಾದ ಮಧುವನ, ಕುಂದಾಪುರ, ನಾವುಂದ ಮತ್ತು 33 ಕೆವಿ ಉಪಕೇಂದ್ರಗಳಾದ ಕಾರ್ಕಳ, ಹೆಬ್ರಿಯಿಂದ ಸರಬರಾಜಾಗುವ ಎಲ್ಲ 11 ಕೆವಿ ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಬಂಟಕಲ್ಲು: ಭಾಗವತ
ಕೆ.ಆರ್.ಹೆಗಡೆಗೆ ಸನ್ಮಾನ
ಶಿರ್ವ: ಇಲ್ಲಿನ ಶ್ರೀಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಶರನ್ನವರಾತ್ರಿ ಪ್ರಯುಕ್ತ 9 ದಿನಗಳ ಪರ್ಯಂತ ಜರುಗಿದ ಸಾಂಸ್ಕೃತಿಕೋತ್ಸವ ಸಮಾರೋಪ ಸಮಾರಂಭದಲ್ಲಿ ರಾಜಾಪುರ ಸಾರಸ್ವತ ಯುವ ವೃಂದದ ವತಿಯಿಂದ ಮಂದಾರ್ತಿ ಮೇಳದ ಹಿರಿಯ ಭಾಗವತರಾದ ಕೆ.ಆರ್. ಹೆಗಡೆ ಅವರನ್ನು ಜಿಪಂ ಅಧ್ಯಕ್ಷ ಬಿ. ಉಪೇಂದ್ರ ನಾಯಕ್ ಮತ್ತು ಹಿರಿಯ ಶಿಕ್ಷಕ ಪುಂಡಲೀಕ ಮರಾಠ ಸನ್ಮಾನಿಸಿದರು. ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಸಡಂಬೈಲು ಶಶಿಧರ ವಾಗ್ಲೆ, ಯುವ ವೃಂದದ ಅಧ್ಯಕ್ಷ ಅನಂತರಾಮ ವಾಗ್ಲೆ, ಗೌರವಾಧ್ಯಕ್ಷ ಉಮೇಶ ಪ್ರಭು ಪಾಲಮೆ, ಕೆ.ಆರ್. ಪಾಟ್ಕರ್ ಇದ್ದರು.