ಕಳವಾದ ಪರ್ಸ್ ಅಂಚೆ ಪೆಟ್ಟಿಗೆಯಲ್ಲಿ!
ಉಪ್ಪಿನಂಗಡಿ: ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಕಳವಾದ ಪರ್ಸ್ ಉಪ್ಪಿನಂಗಡಿ ಅಂಚೆ ಪೆಟ್ಟಿಗೆಯಲ್ಲಿ ನಗದು ರಹಿತ ಪತ್ತೆಯಾಗಿರುವ ಘಟನೆ ಸಂಭವಿಸಿದೆ.
ಸೋಮವಾರ ಉಪ್ಪಿನಂಗಡಿಯ ಅಂಚೆ ಪೆಟ್ಟಿಗೆ ತೆರೆದಾಗ ಅದರಲ್ಲಿ ಒಂದು ಪರ್ಸ್ ಸಿಕ್ಕಿತು. ಪರಿಶೀಲಿದಾಗ ಚಂದ್ರನ್ ಎಂಬ ಹೆಸರಿನ ವ್ಯಕ್ತಿಗೆ ಸೇರಿದ ಹಲವು ದಾಖಲೆ ಪತ್ರಗಳು ಅದಲ್ಲಿದ್ದವು. ಅದರೆ ಚಂದ್ರನ್ ದೂರವಾಣಿ ಸಂಖ್ಯೆ ಅದರಲ್ಲಿ ಇರಲಿಲ್ಲ. ಮತ್ತಷ್ಟು ಪರಿಶೀಲಿಸಿದಾಗ ಮೊಬೈಲ್ ಸಂಖ್ಯೆಯೊಂದು ಲಭಿಸಿತು. ಉಪ್ಪಿನಂಗಡಿ ಪೋಸ್ಟ್ ಮಾಸ್ಟರ್ ತೀರ್ಥಪ್ರಸಾದ್ ಅವರು ಅಂಚೆ ಪೆಟ್ಟಿಗೆಯಲ್ಲಿ ಪರ್ಸ್ ಲಭಿಸಿರುವ ವಿಚಾರವನ್ನು ಆ ಸಂಖ್ಯೆಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿದ ಚಂದ್ರನ್ ಸ್ನೇಹಿತರಿಗೆ ತಿಳಿಸಿದರು. ಗೆಳೆಯನಿಂದ ವಿಚಾರ ತಿಳಿದು ಆಗಮಿಸಿದ ಚಂದ್ರನ್ ಅಂಚೆ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿ, ಪರ್ಸ್ ಹಿಂತಿರುಗಿಸಿದ ಕಳ್ಳನಿಗೂ ಶ್ಲಾಘಿಸಿ ನಿರ್ಗಮಿಸಿದರು.