ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗೋ ಅಕ್ರಮ ಸಾಗಾಟ; ನಾಲ್ವರ ಬಂಧನ

Lingaraj Badiger
Updated On : 30 Oct 2013, 12:33 pm

ಬೆಳ್ತಂಗಡಿ: ಪಿಕಪ್‌ವೊಂದರಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ನಾಲ್ವರನ್ನು ಮಲವಂತಿಗೆ ಗ್ರಾಮದ ದಿಡುಪೆ ಸಮೀಪ ಬೆಳ್ತಂಗಡಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಕಾಜೂರು ನಿವಾಸಿಗಳಾದ ಫಾರೂಕ್ ಜಮಲುದ್ದೀನ್ (24), ಉಮ್ಮರ್ ಫಾರುಕ್ (19), ಅಬ್ದುಲ್ ಖಲಂ (21), ಪಾದೆಗುತ್ತು ನಿವಾಸಿ ಶಾಕೀರ್ ಬಂಧಿತರು. ಸೋಮವಾರ ಮಧ್ಯಾಹ್ನ ಪಿಕಪ್‌ವೊಂದರಲ್ಲಿ ಸೂಕ್ತ ದಾಖಲೆಗಳಿಲ್ಲದೆ ಎರಡು ಜಾನುವಾರುಗಳನ್ನು ದಿಡುಪೆಯಿಂದ ಮುಂಡಾಜೆಯತ್ತ ಸಾಗಿಸಲಾಗುತ್ತಿತ್ತು.  ಊರವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಪಾಸಣೆ ನಡೆಸಿದಾಗ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಒಂದು ಎತ್ತು, ಒಂದು ಎಮ್ಮೆ, ಪಿಕಪ್ ಸೇರಿದಂತೆ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement