ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಧರ್ಮಸ್ಥಳ; ಬೊಲೆರೋ ವಾಹನ ಕಳವು

Lingaraj Badiger
Updated On : 30 Oct 2013, 12:33 pm

ಬೆಳ್ತಂಗಡಿ: ಮಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಕುಟುಂಬ ಸಮೇತ ಬಂದಿದ್ದ ಶೀನ ಎಂಬವರು ಧರ್ಮಸ್ಥಳ ವಸಂತ ಮಹಲ್ ಸಂಕೀರ್ಣದ ಬಳಿ ನಿಲ್ಲಿಸಿದ್ದ ಸಿಲ್ವರ್ ಬಣ್ಣದ ಬೊಲೆರೋ ವಾಹನ ಅ. 24ರಂದು ಕಳವಾಗಿದೆ. ವಾಹನವು ಅಂದು ಬೆಳಗ್ಗೆ 11 ಗಂಟೆಯಿಂದ 1.30ರ ಮಧ್ಯೆ ಕಳವಾಗಿರುವುದಾಗಿ ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಂಗಳದಲ್ಲಿ
ನಿಲ್ಲಿಸಿದ್ದ ಸ್ಕೂಟರ್ ಕಳವು
ಬೆಳ್ತಂಗಡಿ: ಮನೆಯ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಹೀರೋ ಹೋಂಡಾ ಪ್ಲೆಝರ್ ಸ್ಕೂಟರ್ ಅನ್ನು ಕಳವುಗೈದಿರುವುದಾಗಿ ಕಲ್ಮಂಜ ಗ್ರಾಮದ ಉಜಿರೆ ಅಜಿತ್ ನಗರ ನಿವಾಸಿ ಸೀತಾಲಕ್ಷ್ಮೀ ಎಂಬವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ಮನೆಯ ಅಂಗಳದಲ್ಲಿ ನಿಲ್ಲಿಸಲಾಗಿದ್ದ 30 ಸಾವಿರ ಮೌಲ್ಯದ ಸ್ಕೂಟರನ್ನು ಅ.26 ರಾತ್ರಿ ಸುಮಾರು 12 ಗಂಟೆಯ ನಂತರ ಕಳವುಗೈಯ್ಯಲಾಗಿದೆ ಎಂದು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement