ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪ್ರದೀಪ್ ಮೆಂಡನ್‌ಗೆ 1 ವರ್ಷ ಜೈಲು ಶಿಕ್ಷೆ

Lingaraj Badiger
Updated On : 30 Oct 2013, 12:39 pm

ಮಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಸಹಚರ ಪ್ರದೀಪ್ ಮೆಂಡನ್ ಒಂದು ವರ್ಷ ಜೈಲುವಾಸಕ್ಕೆ ಹೈಕೋರ್ಟ್ ನ್ಯಾಯಾಧೀಶರ ಅಧಿಕೃತ ಮುದ್ರೆ ಬಿದ್ದಿದೆ. ಪ್ರದೀಪ್ ಮೆಂಡನ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಅಂದಿನ ಸಿಸಿಬಿ ಇನ್‌ಸ್ಪೆಕ್ಟರ್ ಡಾ. ಎಚ್.ಎನ್. ವೆಂಕಟೇಶ್ ಪ್ರಸನ್ನ ಪೊಲೀಸ್ ಕಮಿಷನರ್ ಮನೀಷ್ ಕರ್ಬಿಕರ್‌ಗೆ ಪ್ರಸ್ತಾವನೆ ಸಲ್ಲಿಸಿದರು. ಈ ಪ್ರಸ್ತಾವನೆ ಒಪ್ಪಿದ ಕಮಿಷನರ್, ಆರೋಪಿ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ ಆತನಿಗೆ ಬಂಧನ ಆದೇಶ ಹೊರಡಿಸಿದರು.
 ಆತನನ್ನು ಬಂಧಿಸಿ ಗುಲ್ಬರ್ಗ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿತ್ತು. ಈ ಆದೇಶವನ್ನು ರಾಜ್ಯ ಸರ್ಕಾರ ಎತ್ತಿ ಹಿಡಿದು, ಹೈಕೋರ್ಟ್‌ನ ಮೂವರು ನ್ಯಾಯಾಧೀಶರ ಸಲಹೆ ಮಂಡಳಿಗೆ ಕಳುಹಿಸಿ ಕೊಟ್ಟಿತ್ತು. ಈ ಬಗ್ಗೆ ಆರೋಪಿ ಹಾಗೂ ಪೊಲೀಸ್ ಅಧಿಕಾರಿಗಳ ವಾದ ಆಲಿಸಿದ, ನ್ಯಾಯಮೂರ್ತಿಗಳು, ಪ್ರದೀಪ್ ಮೆಂಡನ್ ಮೇಲೆ ಹಾಕಲಾದ ಗೂಂಡಾ ಕಾಯ್ದೆ ಸಮರ್ಪಕವಾಗಿದೆ, ಒಂದು ವರ್ಷ ಕಾಲ ಬಂಧನದಲ್ಲಿ ಇಡುವುದು ಸೂಕ್ತ ಎಂದು ಸೋಮವಾರ ಆದೇಶ ಹೊರಡಿಸಿದೆ.
ಬೆಂಕಿ ಅವಘಡ: ಮನೆ ಭಸ್ಮ
ಬಂಟ್ವಾಳ: ಕರ್ಪೆ ಗ್ರಾಮದ ಪಾದೆ ಎಂಬಲ್ಲಿ ಬೆಂಕಿ ಅವಘಡದಿಂದ ಮನೆಯೊಂದು ಸುಟ್ಟು ಭಸ್ಮವಾಗಿ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಇಲ್ಲಿನ ಸತೀಶ್ ಪೂಜಾರಿ- ಮೀನಾಕ್ಷಿ ದಂಪತಿಗೆ ಸೇರಿದ ಮನೆ ಬೆಂಕಿಗೆ ಆಹುತಿಯಾಗಿದೆ. ಇವರಿಬ್ಬರು ಕೊಕ್ಕಡಕ್ಕೆ ತೆರಳಿದ್ದು, ಇವರ ಪುತ್ರಿ ಸಂಜೆ ಶಾಲೆಯಿಂದ ಮನೆಗೆ ಬಂದಾಗ ಮನೆಯೊಳಗಿನಿಂದ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಕೂಡಲೆ ಸ್ಥಳಿಯರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಮನೆಯೊಳಗೆ ಸಂಪೂರ್ಣ ಬೆಂಕಿ ವ್ಯಾಪಿಸಿ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ. ಬಳಿಕ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಸಂಗಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಭಾಕರ್ ಹಾಗೂ ಮಾಜಿ ಉಪಾಧ್ಯಕ್ಷ ದೇವಪ್ಪ ಕರ್ಕೇರಾ ಸ್ಥಳೀಯರಿಂದ ಹಣ ಸಂಗ್ರಹಿಸಿ ಈ ಕುಟುಂಬಕ್ಕೆ ನೀಡಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement