ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೃಷಿಕ ಪರಮೇಶ್ವರ ಗೌಡ ಕೊಲೆ ಪ್ರಕರಣ: ಸಮಗ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

Vishwanath S
Updated On : 31 Oct 2013, 12:38 pm

ಸುಬ್ರಹ್ಮಣ್ಯ: ಉಪ್ಪುಕಳ ಕೃಷಿಕ, ವೃದ್ಧ ಪರಮೇಶ್ವರ ಗೌಡ ಕಿರಿಭಾಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಬಾಳುಗೋಡು ಮತ್ತು ಗ್ರಾಮಸ್ಥರಿಂದ ಪ್ರತಿಭಟನಾ ಸಭೆ ಬುಧವಾರ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಮುಂದೆ ನಡೆಯಿತು.
ಪ್ರತಿಭಟನಾಕಾರರ ಪರವಾಗಿ ತಾಲೂಕು ಬೋರ್ಡ್ ಮಾಜಿ ಸದಸ್ಯ ದುರ್ಗದಾಸ್ ಮಲ್ಲಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಈ 5- 6 ಗ್ರಾಮಗಳಲ್ಲಿ ನಡೆಯುತ್ತಿರುವ ಕೆಲವೊಂದು ಪ್ರಕರಣಗಳಿಂದ ಜನತೆ ಕಂಗೆಟ್ಟು ಹೋಗಿದೆ. ಉಪ್ಪುಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 2 ಮಂದಿಯನ್ನು ಪೊಲೀಸರು ಬಂಧಿಸಿರುವುದು ಶ್ಲಾಘನೀಯ. ಆದರೆ, ಪ್ರಮುಖ ಆರೋಪಿ ಚಂದ್ರಹಾಸನ ಪತ್ತೆಯಾಗದೆ ಸಮಗ್ರ ಚಿತ್ರಣ ಹೊರಬರುವುದು ಕಷ್ಟ. ಇದಕ್ಕೆ ತಾಳೆ ಹಾಕಿಕೊಂಡಿರುವ ರತ್ನಾಪುರ ನಿಧಿ ಅಪಹರಣ ಕೃತ್ಯಕ್ಕೆ ಸಂಬಂಧಿಸಿದಂತೆ ಕೂಡ ಪೂರ್ಣ ತನಿಖೆಯಾಗಬೇಕು ಎಂದರು.
ಹಸುಳೆ ಸಾವು ಪ್ರಕರಣ: ಸಂದೇಹಗಳಿಗೆ ಕಾರಣವಾದ ನಡುಗಲ್ಲು ಚಾರ್ಮಾತ ಸಾರಿಕಾ ಮುಗ್ಧ ಹಸುಳೆಯ ಅಸಹಜ ಸಾವು ದಿಗ್ಭ್ರಮೆ ಮೂಡಿಸುವಂತಹದು. ಈ ಬಗ್ಗೆಯೂ ತನಿಖೆಯಾಗಲೇಬೇಕು. ಈ ಎಲ್ಲಾ ಪ್ರಕರಣದ ಹಿಂದೆ ದೊಡ್ಡ ದುಷ್ಕೃತ್ಯದ ಜಾಲ ಇದೆ. ಹಾಗಾಗಿ ಈ ಎಲ್ಲಾ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಆಯಾಮಗಳಲ್ಲಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಜಿ.ಪಂ. ಸದಸ್ಯ ಕೆ.ಎಸ್. ದೇವರಾಜ್ ಕಳಿಗೆ ಮಾತನಾಡಿ, ಈ ವ್ಯಾಪ್ತಿಯಲ್ಲಿ ನಡೆದ ಎಲ್ಲಾ ಪ್ರಕರಣದ ಸಮರ್ಪಕ ತನಿಖೆಯಾಗದಿದ್ದಲ್ಲಿ ಪೊಲೀಸ್ ಠಾಣೆ ಮುಂದೆ ಸಾವಿರಾರು ಮಂದಿ ಧರಣಿ ಕುಳಿತುಕೊಳ್ಳತ್ತೇವೆ ಎಂದು ಎಚ್ಚರಿಸಿದರು.
ಎಪಿಎಂಸಿ ಸದಸ್ಯ ಸತೀಶ್ ಕೂಜುಗೋಡು, ಹರಿಹರ ಗ್ರಾ.ಪಂ. ಅಧ್ಯಕ್ಷೆ ಕುಸುಮಾವತಿ, ಸಹಕಾರಿ ಧುರೀಣ ಸೋಮಸುಂದರ್ ಕೂಜುಗೋಡು ಮಾತನಾಡಿದರು.
ವಿವಿಧ ಬೇಡಿಕೆಗಳ ಮನವಿಯನ್ನು ಠಾಣಾಧಿಕಾರಿ ನಾಗೇಶ್ ಕದ್ರಿಗೆ ಸಲ್ಲಿಸಲಾಯಿತು.
ಹಿತರಕ್ಷಣಾ ವೇದಿಕೆ ಅಧ್ಯಕ್ಷ ನಿತೀನ್ ಬಾಳುಗೋಡು, ಕಾರ್ಯದರ್ಶಿ ತೇಜಕುಮಾರ್ ತಳೂರು, ಉಪಾಧ್ಯಕ್ಷ ಪ್ರಸನ್ನ ಗೋರ್ತಿಲ, ರವಿಕುಮಾರ್ ಕಿರಿಭಾಗ, ಯುವಕ ಮಂಡಲದ ಶಿಶಿರ್‌ಕಟ್ಟೆಮನೆ, ಸ್ಥಳೀಯರಾದ ದಯಾನಂದ ಕಟ್ಟೆಮನೆ, ಪುರುಷೋತ್ತಮ ಗುಡ್ಡೆಮನೆ, ಬಿಸಿ ವಸಂತ, ಜಯರಾಮ ಆಲ್ಕಬೆ, ತೇಜಕುಮಾರ್ ಮುಂಡೋಕಜೆ, ವಿಶ್ವಯುವಕ ಮಂಡಲದ ಸದಸ್ಯರು, ದಲಿತ ಸಂಘರ್ಷ ಸಮಿತಿ, ಅಯ್ಯಪ್ಪ ಭಜನಾ ಮಂಡಳಿ ಉಪ್ಪುಕಳ, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸದಸ್ಯರು, ಆಟೋ ಮಾಲೀಕ, ಚಾಲಕರು ಪಾಲ್ಗೊಂಡಿದ್ದರು.
ಸಂದೇಹಗಳಿಗೆ ಕಾರಣವಾದ ನಡುಗಲ್ಲು ಚಾರ್ಮಾತ ಸಾರಿಕಾ ಮುಗ್ಧ ಹಸುಳೆಯ ಅಸಹಜ ಸಾವು ದಿಗ್ಭ್ರಮೆ ಮೂಡಿಸುವಂತಹದು. ಈ ಬಗ್ಗೆಯೂ ತನಿಖೆಯಾಗಲೇಬೇಕು. ಈ ಎಲ್ಲಾ ಪ್ರಕರಣದ ಹಿಂದೆ ದೊಡ್ಡ ದುಷ್ಕೃತ್ಯದ ಜಾಲ ಇದೆ. ಹಾಗಾಗಿ ಈ ಎಲ್ಲಾ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಆಯಾಮಗಳಲ್ಲಿ ತನಿಖೆಯಾಗಬೇಕು.
ದುರ್ಗಾದಾಸ್ ಮಲ್ಲಾರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement