ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದತ್ತಿನಿಧಿ ಸ್ಪರ್ಧೆ: ಲೇಖನ ಆಹ್ವಾನ

Vishwanath S
Updated On : 31 Oct 2013, 12:41 pm

ಮಂಗಳೂರು: ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ವತಿಯಿಂದ ವಿವಿಧ ದತ್ತಿನಿಧಿಗಳಿಂದ ಲೇಖನ ಸ್ಪರ್ಧೆ ನಡೆಯಲಿದೆ.
ನಾಡೋಜ ಸಾರಾ ಅಬೂಬಕರ್ ಸಾಹಿತ್ಯ ಪ್ರಶಸ್ತಿ: 2010-12ರಲ್ಲಿ ಪ್ರಕಟವಾದ ಉದಯೋನ್ಮಖ ಲೇಖಕಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕೆ ರಾಜ್ಯದ ಲೇಖಕಿಯರು ತಮ್ಮ ಕಾದಂಬರಿಯ ಮೂರು ಪ್ರತಿಗಳನ್ನು ಕಳುಹಿಸಿಕೊಡಬಹುದು. ನ. 10 ಕೊನೆ ದಿನ.
ಲಲಿತಾ ರೈ ದತ್ತಿನಿಧಿ ಸ್ಪರ್ಧೆ: ಲೇಖಕಿ ಲಲಿತಾ ರೈ ಅವರು ರಚಿಸಿದ 'ಮತ್ತೆ ಬೆಳಗಿತು ಸೊಡರು', 'ಗ್ರಹಣ ಕಳೆಯಿತು' ಕೃತಿಯ ಬಗ್ಗೆ 5-10 ಪುಟಗಳ ವಿಮರ್ಶೆ ಸಿದ್ಧಪಡಿಸಬೇಕು. ನ. 10 ಕೊನೆ ದಿನ.
ಆರೂರು ಲಕ್ಷ್ಮೀರಾವ್ ದತ್ತಿನಿಧಿ ಸ್ಪರ್ಧೆ: 'ಮಹಿಳಾ ದೌರ್ಜನ್ಯ ಸ್ವರೂಪ-ಪರಿಣಾಮ-ಪರಿಹಾರ' ಇದಕ್ಕೆ ಮಹಿಳೆಯರು, ಪುರುಷರು ಲೇಖನ ಕಳುಹಿಸಬಹುದು. 5-10 ಪುಟ ಮೀರಬಾರದು. ಅ. 30 ಕೊನೆ ದಿನ.
ಎ.ಪಿ. ಮಾಲತಿ ದತ್ತಿನಿಧಿ ಸ್ಪರ್ಧೆ: 'ಮಹಿಳೆಯು ಬರೆಯುವ ಸಾಹಿತ್ಯದಲ್ಲಿ ಅನಿಸಿಕೆಯ ಹುಡುಕಾಟ' ಈ ಕುರಿತು ಆಸಕ್ತ ಮಹಿಳೆಯರು ಲೇಖನ ಕಳುಹಿಸಬಹುದು. 5-10 ಪುಟ ಮೀರಿರಬಾರದು. ನ. 10 ಕೊನೆ ದಿನ.
ಲೇಖನಗಳನ್ನು ಅಧ್ಯಕ್ಷರು, ಕರಾವಳಿ ಲೇಖಕಿಯರ-ವಾಚಕಿಯರ ಸಂಘ, ಸಾಹಿತ್ಯ ಸದನ, ಉರ್ವಸ್ಟೋರ್, ಮಂಗಳೂರು-575006 ಇಲ್ಲಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ 9480250244 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
2ರಂದು ಗೂಡು ದೀಪ ಸ್ಪರ್ಧೆ
ಮೂಲ್ಕಿ: ಕಿನ್ನಿಗೋಳಿಯ ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್, ರೋಟರ್ಯಾಕ್ಟ್ ಕ್ಲಬ್, ಯುಗಪುರುಷ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮೂಲ್ಕಿ ವಲಯ ಮತ್ತು  ನಮ್ಮ ಕಿನ್ನಿಗೋಳಿ ಡಾಟ್ ಕಾಮ್‌ನ ಸಂಯುಕ್ತಾಶ್ರಯದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ನ.2ರಂದು ಸಂಜೆ ಕಿನ್ನಿಗೋಳಿಯ ಯುಗಪುರುಷದ ಸಭಾಭವನದಲ್ಲಿ ಗೂಡು ದೀಪ ಸ್ಪರ್ಧೆ ಆಯೋಜಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣೆ ಸಂಖ್ಯೆ 0824 2295423, 9945736459, 9845808561, 9481960238, 9880645630ನ್ನು ಸಂಪರ್ಕಿಸಿ.
ನಾಳೆ 'ಪುಟಾಣಿಗಳ ಬಣ್ಣದ ಭಾಷ್ಯ'
ಬಂಟ್ವಾಳ: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದದ ಸಹಯೋಗದೊಂದಿಗೆ 'ಪುಟಾಣಿಗಳ ಬಣ್ಣದ ಭಾಷ್ಯ- 2013 ಗೋಡೆಯೊಂದಿಗೆ ಮಾತುಕತೆ' ಎಂಬ ಭಿತ್ತಿ ಶೃಂಗಾರದ ವಿಶಿಷ್ಟ ಕಾರ್ಯಕ್ರಮ ಶುಕ್ರವಾರ ತಾಲೂಕಿನ ಕೆಲಿಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.   ಬೆಳಗ್ಗೆ 9.30ಕ್ಕೆ ಚಿತ್ರ ರಚನೆ ಆರಂಭಗೊಳ್ಳಲಿದ್ದು, 11.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಜನಪ್ರತಿನಿಧಿಗಳು, ಶಿಕ್ಷಣ ಇಲಾಖಾಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿಯವರು, ಶಿಕ್ಷಕರು, ಪೋಷಕರು ಪಾಲ್ಗೊಳ್ಳಲಿದ್ದಾರೆ.   ಈ ಶಾಲೆಯ ಒಳಾಂಗಣದಲ್ಲಿ ಅಂದು ಮಕ್ಕಳೇ ಚಿತ್ರ ಬಿಡಿಸಲಿದ್ದಾರೆ. ಶೈಕ್ಷಣಿಕ ಯೋಜನೆಗಳು, ಜನಜೀವನದ ಚಿತ್ತಾರಗಳು ಮಕ್ಕಳಿಂದ ಮೂಡಿಬರಲಿದೆ. ಈಗಾಗಲೇ ತಾಲೂಕಿನ ವಿವಿಧ ಶಾಲೆಗಳಲ್ಲಿ ಈ ಪ್ರಯೋಗವನ್ನು ನಡೆಸಲಾಗಿದ್ದು, ವಿದ್ಯಾರ್ಥಿಗಳಲ್ಲಿ ಚಿತ್ರಕಲೆಯ ಆಸಕ್ತಿ ಬೆಳೆಯುತ್ತದೆ. ಶಾಲೆಯ ಬಗೆಗೆ ಪ್ರೀತಿ, ಆಕರ್ಷಣೆ ಮೂಡುತ್ತದೆ. ಗೋಡೆಯನ್ನು ಶುಚಿಯಾಗಿಡುವ ಕಲ್ಪನೆ ಚಿಗುರೊಡೆಯುವುದರೊಂದಿಗೆ ಗೋಡೆಗಳ ಅಂದವೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ ಎಂದು ಬಣ್ಣದ ಭಾಷ್ಯ- 2013ರ ನಿರ್ದೇಶಕ ತಾರಾನಾಥ ಕೈರಂಗಳ ಹಾಗೂ ಶಿಕ್ಷಣ ಸಂಯೋಜಕ ದೇವದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಗ ತೆರವಿಗೆ ನಿರ್ದಾಕ್ಷಿಣ್ಯ ಕ್ರಮ
ಬಂಟ್ವಾಳ: ವಿಟ್ಲ ಪೇಟೆ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿರುವ ಅಂಗಡಿ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ವಿಟ್ಲ ಗಾಮ ಪಂಚಾಯಿತಿ ಮುಂದಾಗಿದೆ. ಕೆಲವೇ ಕೆಲವು ಬೆರಳೆಣಿಕೆಯ ವರ್ತಕರು ತಾವು ಸ್ವಇಚ್ಛೆಯಿಂದ ಒಪ್ಪಿಕೊಂಡಷ್ಟು ಜಾಗವನ್ನು ತೆರವುಗೊಳಿಸದೆ ಇರುವ ಕಾರಣ ಕಾಮಗಾರಿ ಕುಂಠಿತಗೊಳ್ಳುತ್ತಿದೆ ಎಂಬ ಆರೋಪ ಬುಧವಾರ ನಡೆದ ವಿಟ್ಲ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಗಿದ್ದು, ಈ ಬಗ್ಗೆ ಸಭೆ ಮಹತ್ವದ ನಿರ್ಣಯ ಕೈಗೊಂಡಿತು. ರಸ್ತೆ ವಿಸ್ತರಣೆಗೆ ಜಾಗ ತೆರವುಗೊಳಿಸದೆ ಇರುವ ಸ್ಥಳವನ್ನು ಗುರುತಿಸಿ, ಈ ಸ್ಥಳದಲ್ಲಿರುವ ಕಟ್ಟಡವನ್ನು ಭೂಸ್ವಾಧೀನತೆ ಮೂಲಕ ತೆರವುಗೊಳಿಸಲು ಜಿಲ್ಲಾಧಿಕಾರಿಗೆ ಬರೆಯುವ ಬಗ್ಗೆ ಹಾಗೂ ವಿಟ್ಲ ಹಳೆಯ ಪೊಲೀಸ್ ಠಾಣೆ ಕೆಳಗಡೆ ಉಪಯೋಗವಿಲ್ಲದಿರುವ ಸ್ಥಳದಲ್ಲಿ ರಿಕ್ಷಾ ಪಾರ್ಕಿಂಗ್‌ಗೆ ಸ್ಥಳ ಕಾದಿರಿಸುವ ಬಗ್ಗೆ ನಿರ್ಣಯಿಸಲಾಯಿತು. ಈ ನಿರ್ಣಯಕ್ಕೆ ಸಾಮಾನ್ಯ ಸಭೆ  ಒಪ್ಪಿಗೆ ನೀಡಿತು.
ಶಿವರಂಜನ್, ಭರತ್ ಈಶ್ವರಮಂಗಲ ಆಯ್ಕೆ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಯುವ ಮೋರ್ಚಾದ ನೂತನ ಅಧ್ಯಕ್ಷರಾಗಿ ಶಿವರಂಜನ್ ಮತ್ತು ಕಾರ್ಯದರ್ಶಿಯಾಗಿ ಭರತ್ ಈಶ್ವರಮಂಗಲ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹರೀಶ್ ಕುಲಾಲ್ ಮತ್ತು ಕಿಶೋರ್ ದೋಳ, ಕಾರ್ಯದರ್ಶಿಯಾಗಿ ಸುನೀಲ್ ದಡ್ಡು, ನಾಗೇಶ್ ವಿಟ್ಲ, ಪ್ರವೀಣ್ ಭಾರದ್ವಾಜ್ ನಿಡ್ಪಳ್ಳಿ ಮತ್ತು ವಿನೋದ್ ಹಾಗೂ 13 ಮಂದಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ವಿಶೇಷ ಅಹ್ವಾನಿತರಾಗಿ ಗೋಪಾಲಕೃಷ್ಣ ಹೇರಳೆ, ಸುಧೀರ್ ಶೆಟ್ಟಿ ತೆಂಕಿಲ, ಮಂಜುನಾಥ ಆಚಾರ್ಯ, ಸತೀಶ್ ಪ್ರಭು, ಜಗದೀಶ್ ಪುಣಚ, ಹರಿಪ್ರಸಾದ್ ಯಾದವ್, ಹರೀಶ್ ಆಚಾರ್ಯ, ಸುರೇಶ್ ಭಟ್ ಇಡ್ಕಿದು ಮತ್ತು ಅಶೋಕ್ ಹಾರಾಡಿ ಹಾಗೂ 22 ಮಂದಿ ಕಾಯಂ ಆಹ್ವಾನಿತರನ್ನಾಗಿ ಆಯ್ಕೆ ಮಾಡಲಾಯಿತು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement