ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಡಾ.ರಿತ್ತಿಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ

Rashmi Kasaragodu
Updated On : 2 Sept 2013, 11:04 am

ಮಂಗಳೂರು: ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ವಿದ್ವತ್ ಪ್ರಶಸ್ತಿಗೆ ಧಾರವಾಡದ ಖ್ಯಾತ ಶಾಸನತಜ್ಞ ಡಾ.ಶ್ರೀನಿವಾಸ ಎಚ್. ರಿತ್ತಿ ಅವರನ್ನು ಆಯ್ಕೆ ಮಾಡಲಾಗಿದೆ.
 ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ನಿರ್ವಾಹಕತ್ವದಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಬೆಂಗಳೂರು ಟಿ.ವಿ. ಮೋಹನದಾಸ ಪೈ ಅವರ ತಮ್ಮ ತಾಯಿ ವಿಮಲಾ ಪೈ ಹೆಸರಲ್ಲಿ 10 ಲಕ್ಷ ದತ್ತಿ ನಿಧಿಯನ್ನು ಸಂಶೋಧನಾ ಕೇಂದ್ರದಲ್ಲಿ ನ್ಯಾಸವಾಗಿರಿಸಿದ್ದಾರೆ. ಈ ಪ್ರಶಸ್ತಿಯನ್ನು ವರ್ಷಂಪ್ರತಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ನೆಲೆಯಲ್ಲಿ ವಿದ್ವತ್ ಲೋಕದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡಲು ನಿರ್ಧರಿಸಲಾಗಿದೆ. 2013ರ ಪ್ರಶಸ್ತಿ ಶಾಸನ ತಜ್ಞರಿಗೆ ನೀಡಲಾಗಿದೆ ಎಂದು ಸಂಶೋಧನೆ ಕೇಂದ್ರ ನಿರ್ದೇಶಕ ಪ್ರೊ.ಹೇರಂಜೆ ಕೃಷ್ಣ ಭಟ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಪ್ರಶಸ್ತಿ ಮೊತ್ತ 1 ಲಕ್ಷ. ಕನ್ನಡ ಸಾಹಿತ್ಯ, ಇತಿಹಾಸ, ಭಾಷಾ ಶಾಸ್ತ್ರ, ಸಂಶೋಧನೆ ಇತ್ಯಾದಿ ಕ್ಷೇತ್ರದಲ್ಲಿ ಖ್ಯಾತನಾಮರಿಗೆ ಪ್ರಶಸ್ತಿ ನೀಡಲಾಗುವುದು. ಈ ಬಗ್ಗೆ ವಿದ್ವಾಂಸರ ಶಿಫಾರಸನ್ನು ಅನುಲಕ್ಷಿಸಿ ಆಯ್ಕೆ ಸಮಿತಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಡೆಸುತ್ತದೆ ಎಂದು ಹೇಳಿದರು.
 ಡಾ.ಶ್ರೀನಿವಾಸ್ ಕರ್ನಾಟಕ ವಿವಿಯಲ್ಲಿ ದಶಕಗಳ ಕಾಲ ಪ್ರಾಧ್ಯಾಪಕರಾಗಿದ್ದರು. ಶಾಸನಗಳ ಅಧ್ಯಯನಕ್ಕೆ ಸಂಶೋಧನೆಯತ್ತ ವಿಶೇಷ ಗಮನ ಹರಿಸಿದರು ಎಂದು ತಿಳಿಸಿದರು.
 'ಎ ಹಿಸ್ಟರಿ ಆಫ್ ಏನ್ಷಿಯಂಟ್ ಇಂಡಿಯಾ' ಮೊದಲಾದ ಗ್ರಂಥಗಳಲ್ಲಿ ನಮ್ಮ ರಾಷ್ಟ್ರದ ಚರಿತ್ರೆ ಕುರಿತ ಅಧ್ಯಯನವನ್ನು ಡಾ.ರಿತ್ತಿ ಇತರ ವಿದ್ವಾಂಸರ ಜತೆಗೂಡಿ ರಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement