ಬಹುಭಾಷಾ ಪಂಡಿತ, ಯಕ್ಷಗಾನ ಅರ್ಥಧಾರಿ ಪೆರ್ಲ ಕೃಷ್ಣ ಭಟ್ ಇನ್ನಿಲ್ಲ
ಮಂಗಳೂರು: ಬಹುಭಾಷಾ ಪಂಡಿತ, ಯಕ್ಷಗಾನದ ಹಿರಿಯ ಅರ್ಥಧಾರಿ, ಗಡಿನಾಡ ಕನ್ನಡಿಗ ಪೆರ್ಲ ಕೃಷ್ಣ ಭಟ್ (90) ಕಾಸರಗೋಡು ತಾಲೂಕು ಪೆರ್ಲದ ಸ್ವಗೃಹದಲ್ಲಿ ಸೋಮವಾರ ನಿಧನರಾದರು. 1923ರ ಮೇ 16ರಂದು ಪೆರ್ಲ ಸಮೀಪದ ಪಡ್ರೆಯಲ್ಲಿ ಜನಿಸಿದ ಕೃಷ್ಣ ಭಟ್, 1947ರಿಂದ 1978ರವರೆಗೆ ಸುದೀರ್ಘ 31 ವರ್ಷಗಳ ಕಾಲ ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲ್ನಲ್ಲಿ ಹಿಂದಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ಆಗ್ರಾದಲ್ಲಿ 1945ರಲ್ಲಿ ಜರುಗಿದ ಅಖಿಲ ಭಾರತ ಸಂಸ್ಕೃತ ಸಾಹಿತ್ಯ ಸಮ್ಮೇಳನದಲ್ಲಿ ಮೈಸೂರು ಸಂಸ್ಥಾನ ಪ್ರತಿನಿಧಿಯಾಗಿ ಭಾಗವಹಿಸಿದ್ದರು.