ಜೈಲರ್ ಮೇಲೆ ಕೈದಿ ಹಲ್ಲೆ
ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬ ಜೈಲರ್ನ ಕಾಲರ್ ಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾನೆ. ವಿಚಾರಣಾಧೀನ ಕೈದಿ ಸೂರ್ಯ ಕುಮಾರ್ ಎಂಬಾತ ಜೈಲರ್ ವಿಜಯಕುಮಾರ್ ಚೌಹಾಣ್ಗೆ ಹಲ್ಲೆ ನಡೆಸಿ ದೂಡಿ ಹಾಕಿದ್ದಾರೆ. ಮಂಗಳವಾರ ಬೆಳಗ್ಗೆ ಕೈದಿ ಪ್ರದೀಪ್ ಮೆಂಡನ್ ಜತೆ ಕೊಲೆ ಆರೋಪಿ ಸೂರ್ಯ ಕುಮಾರ್ ಯಾನೆ ಟಿ.ಎಂ. ಕುಮಾರ್ ಜತೆ ಮಾತನಾಡುತ್ತಿದ್ದ. ಇದೇ ವೇಳೆ ಸ್ಥಳಕ್ಕೆ ಬಂದ ಜೈಲರ್ ಗೂಂಡಾ ಪ್ರದೀಪ್ ಜತೆ ಮಾತನಾಡಬೇಡ ಎಂದು ಎಚ್ಚರಿಕೆ ನೀಡಿದರು. ಇದರಿಂದ ಸಿಟ್ಟಿಗೆದ್ದ ಸೂರ್ಯಕುಮಾರ್ ಆಕ್ರೋಶ ವ್ಯಕ್ತಪಡಿಸಿದ. ಮಾತಿಗೆ ಮಾತು ಬೆಳೆದು ಕಾಲರ್ ಹಿಡಿದು ದೂಡಿ ಹಲ್ಲೆ ನಡೆಸಿದ್ದಾನೆ. ಬೆಳಗ್ಗೆ 10.30 10.40ರ ನಡುವೆ ಜಗಳ ನಡೆದಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಗೆ ಜೈಲರ್ ವಿಜಯಕುಮಾರ್ ದೂರು ನೀಡಿದ್ದಾರೆ. ಸೂರ್ಯ ಕುಮಾರ್ ಬರ್ಕೆ ಠಾಣೆ ವ್ಯಾಪ್ತಿಯಲ್ಲಿ ವೃದ್ಧನ ಮೇಲೆ ಲೈಂಗಿಕ ಹಲ್ಲೆ ನಡೆಸಿ ಕೊಲೆಗೈದ ಆರೋಪದಲ್ಲಿ ಜೈಲು ಸೇರಿದ್ದ.