10 ಕೆಜಿ ಕೇಸರಿ ವಶ: ಆರೋಪಿ ಸೆರೆ
ಮಂಗಳೂರು: ದುಬೈಯಿಂದ ಬರುತ್ತಿದ್ದ ಪ್ರಯಾಣಿಕನ ಬಳಿ ಇದ್ದ 10 ಕೆಜಿ ಕೇಸರಿಯನ್ನು ಬಜಪೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.ಆರೋಪಿ ಕಾಸರಗೋಡು ಪಳ್ಳಿಕೆರೆ ನಿವಾಸಿ ಅಬ್ದುಲ್ ಶುಕುರ್ ಎಂಬಾತನನ್ನು ಬಂಧಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಕೇಸರಿ ಮೌಲ್ಯ 10 ಲಕ್ಷ ಅಂದಾಜಿಸಲಾಗಿದೆ. ಏರ್ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಬುಧವಾರ ಬೆಳಗ್ಗೆ 10.30ಕ್ಕೆ ಆಗಮಿಸಿದ ವೇಳೆ ಆರೋಪಿ ಬ್ಯಾಗ್ನಲ್ಲಿ ಅಡಗಿಸಿಟ್ಟ ಕೇಸರಿಯನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದರು. ಕಸ್ಟಮ್ಸ್ ಸಹಾಯಕ ಆಯುಕ್ತ ಶ್ರೀನಿವಾಸ ಫಳನಿ, ಅಧೀಕ್ಷಕ ಸಿ.ಎನ್. ರಾಜಶೇಖರ, ವಾಸುದೇವ ನಾಯಕ್ ದಂಬೆ, ಬಿ.ಪ್ರಭಾಕರ ಪೂಜಾರಿ, ಲಯನೆಲ್ ಫರ್ನಾಂಡಿಸ್, ಬಿ.ಎ.ಕಾರ್ಯಪ್ಪ ಕಾರ್ಯಾಚರಣೆ ನಡೆಸಿದರು.