ಜೈನ ಬಸದಿ ಕಳವು ಪ್ರಕರಣ: ಆರೋಪಿ ಪೊಲೀಸ್ ಕಸ್ಟಡಿಗೆ
ಕಾರ್ಕಳ: ಮೂಡುಬಿದಿರೆ ಜೈನ ಬಸದಿಯ ವಿಗ್ರಹ ಕಳವು ಪ್ರಕರಣದ ಬಂಧಿತ ಆರೋಪಿ ಒಡಿಶಾದ ಘನಶ್ಯಾಮ್ ದಾಸ್ನನ್ನು ಮೂರು ದಿನಗಳ ಕಾಲ ಕಾರ್ಕಳ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಕಾರ್ಕಳ ನ್ಯಾಯಾಲಯದಲ್ಲಿ ಈ ಕುರಿತು ಬುಧವಾರ ವಿಚಾರಣೆ ನಡೆಯಿತು. ಆರೋಪಿ ಘನಶ್ಯಾಮ್ ದಾಸ್, ಕಾರ್ಕಳದ ಜ್ಯುವೆಲ್ಲರಿ ಅಂಗಡಿಯೊಂದರಿಂದಲೂ ಚಿನ್ನಾಭರಣ ಕಳವು ಮಾಡಿರುವುದಾಗಿ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.