ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನವಜಾತ ಶಿಶುವಿಗೆ ಅಪರೂಪ ಶಸ್ತ್ರಕ್ರಿಯೆ

Mainashree
Updated On : 5 Sept 2013, 12:09 pm

ಮಂಗಳೂರು: ನಗರದ ಮಂಗಳಾ ಆಸ್ಪತ್ರೆಯಲ್ಲಿ ಶ್ವಾಸಮಾರ್ಗ ಮೂಳೆಯಿಂದ ಕಟ್ಟಿಕೊಳ್ಳುವ ಉಸಿರಾಟ ತೊಂದರೆಯೊಂದಿಗೆ ಜನಿಸಿದ ನವಜಾತ ಶಿಶುವಿಗೆ ಅಪರೂಪದ ಶಸ್ತ್ರಕ್ರಿಯೆ ನಡೆಸಿ ಗುಣಪಡಿಸಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಆಸ್ಪತ್ರೆ ಇಎನ್‌ಟಿ ತಜ್ಞ ಡಾ.ಗೌತಮ್ ಕುಳಮರ್ವ, ಇಂಥ ಉಸಿರಾಟ ತೊಂದರೆ ಜೀವಕ್ಕೆ ಅಪಾಯವಾಗುವುದರಿಂದ ಶಿಶು ಜನಿಸಿದ 36 ಗಂಟೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಬೇಕು. ನವಜಾತ ಶಿಶುಗಳು ನಮ್ಮಂತೆ ಮೂಗು ಕಟ್ಟಿಕೊಂಡರೆ ಬಾಯಿಯ ಮೂಲಕ ಉಸಿರಾಡಲಾರವು. ಪ್ರಾಣವಾಯು ಮೂಗಿನ ಹೊಳ್ಳೆಗಳಿಂದ ಗಂಟಲಿನ ಮೂಲಕ ಶ್ವಾಸನಾಳಗಳಿಂದ ಶ್ವಾಸಕೋಶ ಸೇರುವುದು. ಇದು ಶಿಶುಗಳ ಉಸಿರಾಟದ ಕ್ರಮ. ಈ ಹಸುಳೆಯು ಬೈಲಾಟರಲ್ ಕೊಯೇನಲ್ ಅಟ್ರೆಸಿಯ ಎಂಬ ಜನ್ಮಜಾತ ಕಾಯಿಲೆಯಿಂದ ಬಳಲುತ್ತಿತ್ತು. ಈ ವೈಕಲ್ಯದಲ್ಲಿ ಮೂಗು ಮತ್ತು ಗಂಟಲಿನ ನಡುವಿನ ಶ್ವಾಸಮಾರ್ಗ ಮೂಳೆಯೊಂದರ ಅಸಹಜ ಬೆಳವಣಿಗೆಯಿಂದ ಕಟ್ಟುಕೊಂಡಿತ್ತು. ಇದು ಶಿಶುವಿನ ಜೀವಕ್ಕೆ ಮಾರಕವಾಗಿ ಪರಿಣಮಿಸಿತ್ತು. 20 ಸಾವಿರದಿಂದ 30 ಸಾವಿರ ಶಿಶು ಜನನಕ್ಕೆ ಒಮ್ಮೆ ಮಾತ್ರ ಇಂಥ ಪ್ರಕರಣ ಕಂಡುಬರುತ್ತದೆ ಎಂದರು. ಇಎನ್‌ಟಿ ತಜ್ಞ ಡಾ.ಗೌತಮ್ ಕುಳಮರ್ವ ಎಂಡೋಸ್ಕೋಪಿನ ಮೂಲಕ ಸರ್ಜರಿ ನಡೆಸಿ ಅಡ್ಡವಾಗಿದ್ದ ಮೂಳೆಯನ್ನು ತೆಗೆದು ಹಾಕಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement