ಕಲ್ಮಕಾರು ಸುತ್ತ ಕಾಡಾನೆ ಹಾವಳಿ
ಸುಬ್ರಹ್ಮಣ್ಯ: ಕಳೆದ ಹತ್ತು ದಿನಗಳಿಂದ ಕಲ್ಮಕಾರು ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಾದ ಕೊಪ್ಪಡ್ಕ, ಗೂನಡ್ಕ ಪರಿಸರದ ಕೃಷಿಕರ ತೋಟಗಳಿಗೆ ಕಾಡಾನೆಗಳು ನಿರಂತರವಾಗಿ ದಾಳಿ ಮಾಡುತ್ತಿದ್ದು ತೋಟದಲ್ಲಿನ ಅಪಾರ ಕೃಷಿ ಬೆಳೆಗಳನ್ನು ನಾಶಪಡಿಸಿವೆ. ಭಾನುವಾರದಿಂದ ಸತತವಾಗಿ ಈ ಪರಿಸರದ ಕೃಷಿಕರ ತೋಟಗಳಿಗೆ ಕಾಡಾನೆಗಳು ದಾಳಿ ಇಟ್ಟಿವೆ. ಕಾಡಾನೆಗಳಿಂದ ನಾಶವಾದ ಕೃಷಿ ಬೆಳೆಗಳ ಕೃಷಿಕರ ತೋಟಗಳಿಗೆ ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ದಿನೇಶ್ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಮಂಗಳವಾರ ಮತ್ತು ಬುಧವಾರ ಸತತ ಎರಡು ದಿನ ಭೇಟಿ ನೀಡಿ ಬೆಳೆಹಾನಿ ಮಾಹಿತಿ ಸಂಗ್ರಹಿಸಿದ್ದಾರೆ.