ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕ್ಯಾಂಟೀನ್‌ಗೆ ಅಧಿಕಾರಿಗಳ ದಾಳಿ, ಬಾಲಕ ವಶಕ್ಕೆ

Lingaraj Badiger
Updated On : 6 Sept 2013, 10:44 am

ಪುತ್ತೂರು: ಪುತ್ತೂರಿನ ಕ್ಯಾಂಟೀನ್‌ವೊಂದಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಗುರುವಾರ ಹಠಾತ್ ದಾಳಿ ನಡೆಸಿ ಅಲ್ಲಿ ಕೆಲಸಕ್ಕಿದ್ದ 15 ವರ್ಷದ ಬಾಲಕನೊಬ್ಬನನ್ನು ವಶಕ್ಕೆ ತೆಗೆದುಕೊಂಡು, ಪುನರ್ವಸತಿ ಕಾರ್ಯಕ್ರಮದಡಿ ಆತನ ರಕ್ಷಣೆಗೆ ಮುಂದಾಗಿದೆ.
ಕ್ಯಾಂಟೀನ್‌ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಬೆಳ್ಳಾರೆಯ ಕಲ್ಮಡ್ಕ ನಿವಾಸಿ ಗೋವಿಂದ ನಾಯ್ಕ ಎಂಬವರ ಪುತ್ರ ಬಿ.ಬಾಲಚಂದ್ರನನ್ನು ಬಾಲ ಕಾರ್ಮಿಕನೆಂಬ ನೆಲೆಯಲ್ಲಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಈ ವೇಳೆ ಆತ ತಾನು 8ನೇ ತರಗತಿತನಕ ಬೆಳ್ಳಾರೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿರುವುದಾಗಿ ತಿಳಿಸಿದ್ದ. ಅಧಿಕಾರಿಗಳು ಬಾಲಕನನ್ನು ಆತ ಕಲಿತ ಶಾಲೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಆತನ ಜನನ ದಿನಾಂಕ 1998 ಮೇ 15ಎಂದು ತಿಳಿದುಬಂದಿತ್ತು. ಬಳಿಕ ಅಧಿಕಾರಿಗಳು ಆತನ ರಕ್ಷಣೆ ಮತ್ತು ಪಾಲನೆಗಾಗಿ ಮಕ್ಕಳ ಕಲ್ಯಾಣ ಇಲಾಖೆ ಅಧ್ಯಕ್ಷೆ ಆಶಾ ನಾಯಕ್ ಅವರ ಎದುರು ಹಾಜರುಪಡಿಸಿ ಆತನನ್ನು ಪುನರ್ವಸತಿ ಕಾರ್ಯಕ್ರಮದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.
15 ವರ್ಷ ದಾಟಿದ ಆತ ಬಾಲ ಕಾರ್ಮಿಕನಲ್ಲದ ಕಾರಣ ಕ್ಯಾಂಟಿನ್ ಮಾಲೀಕರ ವಿರುದ್ಧ ಬಾಲ ಕಾರ್ಮಿಕ ಕಾನೂನಿನಡಿ ಪ್ರಕರಣ ದಾಖಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಆತನಿಗೆ ಕ್ಯಾಂಟಿನ್ ಮಾಲೀಕರು ದಿನವೊಂದಕ್ಕೆ ರು. 150 ಸಂಬಳ ನೀಡುತ್ತಿದ್ದುದು ತನಿಖೆ ವೇಳೆ ಕಂಡುಬಂದ ಹಿನ್ನೆಲೆಯಲ್ಲಿ ಕನಿಷ್ಠ ಕೂಲಿ ನೀಡದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಆನಂದ ಮೂರ್ತಿ ನೇತೃತ್ವದಲ್ಲಿ ಪುತ್ತೂರಿನ ಹಿರಿಯ ಕಾರ್ಮಿಕ ನಿರೀಕ್ಷಕಿ ಕೃಷ್ಣಮ್ಮ ಮತ್ತು ಕಾರ್ಮಿಕ ಇಲಾಖೆಯ ಚಿದಾನಂದ ಕಾಮತ್ ದಾಳಿ ನಡೆಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement