ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಡಾ. ಬಿ. ಜನಾರ್ದನ ಭಟ್, ಕಸ್ತೂರಿ ಬಾಯಿರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ

Mainashree
Updated On : 5 Sept 2013, 9:18 am

ಮೂಡುಬಿದಿರೆ: ಡಾ.ಬಿ.ಜನಾರ್ದನ ಭಟ್ ಬೆಳ್ಮಣ್ಣು ಅವರ 'ಉತ್ತರಾಧಿಕಾರ' ಕೃತಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಹಾಗೂ ಬಾಗಲಕೋಟೆಯ ಕಸ್ತೂರಿ ಬಾಯಿರಿ ಅವರ 'ಒಂದೇ ಕಾಂಡದ ಕುರ್ಚಿ' ಕಥಾಸಂಕಲನಕ್ಕೆ ವರ್ಧಮಾನ ಉದಯೋನ್ಮುಖ ಸಾಹಿತಿ ಪ್ರಶಸ್ತಿ ಲಭಿಸಿದೆ.
2012ರ ಪ್ರಶಸ್ತಿಗೆ 2007ರಲ್ಲಿ ಮೊದಲಾವೃತ್ತಿಯಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿತ್ತು.
ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠದ ಆಡಳಿತ ಮಂಡಳಿಯು ಸಿ.ಕೆ. ಪಡಿವಾಳ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. ಮೂಡುಬಿದಿರೆ ದಸರಾ ಸಾಹಿತ್ಯೋತ್ಸವದಲ್ಲಿ ವರ್ಧಮಾನ ಪ್ರಶಸ್ತಿಪ್ರದಾನ ಸಮಾರಂಭ ನಡೆಸಲು ತೀರ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement