ತುಳು ರಾಜ್ಯ ಭಾಷೆಗಾಗಿ ನಾಳೆ ಹಕ್ಕೊತ್ತಾಯ
ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಅಂಗೀಕರಿಸಬೇಕು ಮತ್ತು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಲು ಮಂಗಳೂರಿನ ನಮ್ಮ ತುಳುನಾಡ್ ಟ್ರಸ್ಟ್ ಸೆ.7ರಂದು ನಗರದಲ್ಲಿ ಹಕ್ಕೊತ್ತಾಯ ಮೆರವಣಿಗೆ ಹಮ್ಮಿಕೊಂಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್. ಉಳ್ಳಾಲ್, ದಕ್ಷಿಣ ಭಾರತದಲ್ಲಿ 3 ಸಾವಿರ ವರ್ಷ ಇತಿಹಾಸವಿರುವ ಪಂಚದ್ರಾವಿಡ ಭಾಷೆಗಳಲ್ಲಿ ಮೂಲದ್ರಾವಿಡ ಭಾಷೆಯಿಂದ ಪ್ರಥಮವಾಗಿ ತುಳು ಸ್ವತಂತ್ರ ಭಾಷೆಯಾಗಿದೆ ಎಂದರು.