ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ತುಳು ರಾಜ್ಯ ಭಾಷೆಗಾಗಿ ನಾಳೆ ಹಕ್ಕೊತ್ತಾಯ

Lingaraj Badiger
Updated On : 6 Sept 2013, 10:44 am

ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಅಂಗೀಕರಿಸಬೇಕು ಮತ್ತು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಲು ಮಂಗಳೂರಿನ ನಮ್ಮ ತುಳುನಾಡ್ ಟ್ರಸ್ಟ್ ಸೆ.7ರಂದು ನಗರದಲ್ಲಿ ಹಕ್ಕೊತ್ತಾಯ ಮೆರವಣಿಗೆ ಹಮ್ಮಿಕೊಂಡಿದೆ.
 ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್. ಉಳ್ಳಾಲ್, ದಕ್ಷಿಣ ಭಾರತದಲ್ಲಿ ಸುಮಾರು 3 ಸಾವಿರ ವರ್ಷ ಇತಿಹಾಸವಿರುವ ಈಗಿನ ಪಂಚದ್ರಾವಿಡ ಭಾಷೆಗಳಲ್ಲಿ ಮೂಲದ್ರಾವಿಡ ಭಾಷೆಯಿಂದ ಪ್ರಥಮವಾಗಿ ತುಳು ಸ್ವತಂತ್ರವಾದ ಭಾಷೆಯಾಗಿದೆ. ಇದನ್ನು ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯನ್ನೊಳಗೊಂಡ ತುಳುನಾಡಿನಲ್ಲಿ ಸರ್ವಧರ್ಮದವರು ಮಾತನಾಡುತ್ತಿದ್ದು, ಇದಕ್ಕೆ ಸ್ವಂತ ಲಿಪಿ ಕೂಡ ಇದೆ. ಸುಮಾರು ಒಂದು ಕೋಟಿಗೂ ಅಧಿಕ ಜನರು ಮಾತನಾಡುವ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆ ಎಂದು ಅಂಗೀಕರಿಸಬೇಕು. ಸಂವಿಧಾನದ 8ನೇ ಪರಿಚ್ಛೇದದಲ್ಲಿ ತುಳು ಭಾಷೆಯನ್ನು ಸೇರಿಸಬೇಕು. ಇದಕ್ಕಾಗಿ 7ರಂದು ಮಧ್ಯಾಹ್ನ 2.30ಕ್ಕೆ ಅಂಬೇಡ್ಕರ್ ವೃತ್ತದಿಂದ ಹಕ್ಕೊತ್ತಾಯ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಬಳಿ ತುಳುನಾಡಿನ ಸರ್ವ ಸಂಘಟನೆಗಳು ಹಕ್ಕೊತ್ತಾಯ ನಡೆಸಲಿವೆ ಎಂದರು.
10ರಂದು ಕೃಷಿ ಖುಷಿ ಪ್ರಶಸ್ತಿ ಪ್ರದಾನ
ಮೂಲ್ಕಿ; ಕಟೀಲಿನ ಕಲಾದೇಗುಲ ಮತ್ತು ಚಂದ್ರಕಾಂತ ಸೇವಾಶ್ರಮದ ಸಂಯುಕ್ತಾಶ್ರಯದಲ್ಲಿ ಪ್ರಸ್ತುತ ಸಾಲಿನ ಕೃಷಿ ಖುಷಿ ಪ್ರಶಸ್ತಿ ಪ್ರದಾನ ಸಮಾರಂಭವು ಗಣೇಶೋತ್ಸವದ ಸಂದರ್ಭದಲ್ಲಿ ಸೆ.10ರಂದು ರಾತ್ರಿ ಕಟೀಲಿನ ಶಾಲೆ ಸರಸ್ವತಿ ಸದನದಲ್ಲಿ ಜರುಗಲಿದೆ. ಪ್ರಗತಿಪರ ಕೃಷಿಕ ಬಾಬು ಶೆಟ್ಟಿ ಮಲ್ಲಿಗೆ ಅಂಗಡಿ ಹಾಗೂ ಲಕ್ಷ್ಮೀ ಪೂಜಾರ್ತಿ  ಕೆರೆಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಚಂದ್ರಕಾಂತ ಸೇವಾಶ್ರಮದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement