ಮಂಗ್ಳೂರು ಏರ್ಪೋರ್ಟ್ಗೆ ಹೊಸ ಟ್ರಾಫಿಕ್ ಕಂಟ್ರೋಲರ್
ಮಂಗಳೂರು: ಮಂಗಳೂರಿನ ಕೆಂಜಾರಿನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಸ್ವಯಂಚಾಲಿತ ಏರ್ ಟ್ರಾಫಿಕ್ ಕಂಟ್ರೋಲರ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಕಾರ್ಯಾರಂಭಗೊಂಡಿದೆ.
2010 ಮೇ 22ರಂದು ವಿಮಾನ ದುರಂತ ಸಂಭವಿಸಿದ ಬಳಿಕ ಈ ವಿಮಾನ ನಿಲ್ದಾಣದ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪಕ್ಕೆ ಜೀವಬಂದಿತ್ತು. ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ನಿರ್ದೇಶನ ಮೇರೆಗೆ ಹಲವು ಸುಧಾರಣಾ ಕ್ರಮ ಕೈಗೊಂಡಿದ್ದು, ಅದರಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ವ್ಯವಸ್ಥೆ ಅಳವಡಿಸುವುದೂ ಸೇರಿತ್ತು. ಇದರಿಂದ ವಿಮಾನ ಆಗಮನ, ನಿರ್ಗಮನ ವ್ಯವಸ್ಥೆಯನ್ನು ಉನ್ನತೀಕರಿಸಿದಂತಾಗಿದೆ. ರಾಡಾರ್ ಮೂಲಕ ಗಾಳಿಯ ಸಂಚಲನ, ವಿಮಾನ ಹಾರಾಟದ ಎತ್ತರ, ಗಾಳಿ ಬೀಸುವ ದಿಕ್ಕು ಸೇರಿದಂತೆ ಗಾಳಿ-ನೆಲ ನಡುವಿನ ಅಂತರದ ಡಾಟಾ ಲಿಂಕ್ ಸಂದೇಶವನ್ನು ಟ್ರಾಫಿಕ್ ಕಂಟ್ರೋಲರ್ ಕಳುಹಿಸಲಿದೆ. ವಿಮಾನ ಸಂಚಾರ ನಿಯಂತ್ರಣಕ್ಕೆ ಅಗತ್ಯವಾದ ಸಂದೇಶವನ್ನು ಇದರಿಂದ ನೀಡಬಹುದಾಗಿದ್ದು, ಬೆಂಗಳೂರು, ಚೆನ್ನೈ, ತಿರುವನಂತಪುರಂನಲ್ಲಿರುವ ರಾಡಾರ್ಗಳಂತೆ ಈ ವಿಮಾನ ನಿಲ್ದಾಣದ ರಾಡಾರ್ ಕೂಡ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ.