ಹಾಸ್ಟೆಲ್ಗಳ ಸುಧಾರಣೆ: ಇಂದು ಎಬಿವಿಪಿ ಪ್ರತಿಭಟನೆ
ಮಂಗಳೂರು: ರಾಜ್ಯದಲ್ಲಿರುವ ಎಸ್ಸಿ ಎಸ್ಟಿ ಹಾಸ್ಟೆಲ್ ಸುಧಾರಣೆಗೆ ಆಗ್ರಹಿಸಿ ಸೆ.6ರಂದು ಎಬಿವಿಪಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ.50ಕ್ಕಿಂತ ಜಾಸ್ತಿ ಎಸ್ಸಿ, ಎಸ್ಟಿ, ಬಿಸಿಎಂ ಜವಾನರಿದ್ದಾರೆ. ಇವರ ಬದುಕು ಹಸನಾಗಲು ಹಾಸ್ಟೆಲ್ಗಳೇ ಕಾರಣ. ರಾಜ್ಯದಲ್ಲಿರುವ ಇಂಥ ಹಾಸ್ಟೆಲ್ಗಳ ಸಮೀಕ್ಷೆಯನ್ನು ಎಬಿವಿಪಿ ನಡೆಸಿದ್ದು, ಕುಂದುಕೊರತೆ ತಿಳಿಸಲು ಸರ್ಕಾರವನ್ನು ಕೋರಿತ್ತು. ಹಿಂದಿನ ಸರ್ಕಾರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ 850ರಿಂದ 1000ಕ್ಕೆ ಮಾಸಿಕ ಊಟದ ಖರ್ಚು ನೀಡುವುದಾಗಿ ಬಜೆಟ್ನಲ್ಲಿ ಘೋಷಣೆ ಮಾಡಿತ್ತು. ಇದನ್ನು ಹಾಲಿ ಸರ್ಕಾರ ರದ್ದುಪಡಿಸಿದೆ ಎಂದು ರಾಜ್ಯ ಕಾರ್ಯದರ್ಶಿ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.