ಇಂದು ಜಿಲ್ಲೆಗೆ ಸಚಿವ ಖಾದರ್ ಭೇಟಿ
ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಸೆ. 7 ರಂದು ಜಿಲ್ಲೆಗೆ ಆಗಮಿಸಲಿದ್ದು, ಬೆಳಗ್ಗೆ 9ಕ್ಕೆ ಗಂಟೆಗೆ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆಯುಲ ರಕ್ತದಾನ ಶಿಬಿರ ಉದ್ಘಾಟಿಸುವರು.
ಬೆಳಗ್ಗೆ 9.30ಕ್ಕೆ ಸೋಮೇಶ್ವರ ಆನಂದಾಶ್ರಮ ಪ್ರೌಢಶಾಲೆಯಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಳ್ಳುವರು. ಬೆಳಗ್ಗೆ 11ಕ್ಕೆ ಕೊಣಾಜೆ ಗ್ರಾ.ಪಂ. ಪೌಷ್ಠಿಕ ಆಹಾರ ಸಪ್ತಾಹದಲ್ಲಿ ಭಾಗವಹಿಸುವರು. ಬೆಳಗ್ಗೆ 11.30ಕ್ಕೆ ಗೋರಿಗುಡ್ಡೆ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡುವರು.
ಸಂಜೆ 3.45ಕ್ಕೆ ಜೆಪ್ಪು ಯೇನೆಪೋಯ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4.15ಕ್ಕೆ ಬಂಟ್ಸ್ ಹಾಸ್ಟೆಲ್ನ ಬಂಟರ ಸಂಘದ ಕಬ್ಬಡಿ ಪಂದ್ಯಾಟ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ 5ಕ್ಕೆ ಪುರಭವನದ ಸಂಗೀತೋತ್ಸವ ಭರತನಾಟ್ಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.