ಇಂದು ರಾತ್ರಿ-ಹಗಲು ಧರಣಿ
ಮಂಗಳೂರು: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿವೈಎಫ್‌ಐ) ವತಿಯಿಂದ ಸೆ. 6 ರಂದು ಬೆಳಗ್ಗೆ 10 ರಿಂದ ಸೆ. 7ರ ಬೆಳಗ್ಗೆ 10ರವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪಂಜಿಮೊಗರು ಜೋಡಿಕೊಲೆ ಸಿಬಿಐ ತನಿಖೆಗೆ ಆಗ್ರಹಿಸಿ ಹಗಲು ರಾತ್ರಿ ಪ್ರತಿಭಟನೆ ಧರಣಿ ನಡೆಯಲಿದೆ. ಪಂಜಿಮೊಗರಿನ ನಿವಾಸಿ ರಝಿಯಾ ಮತ್ತು 8 ವರ್ಷದ ಮಗಳು ಫಾತಿಮಾ ಝುಹಾಳ ಹತ್ಯೆ ನಡೆದು 2 ವರ್ಷ ಕಳೆದಿದೆ. ಆರಂಭದಲ್ಲಿ ಪ್ರಕರಣವನ್ನು ಭೇದಿಸಲು ಸ್ಥಳೀಯ ಪೊಲೀಸರು ವಿಫಲರಾದಾಗ ಡಿವೈಎಫ್‌ಐ ಸಿಬಿಐ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿತ್ತು. ಆದರೆ 2 ವರ್ಷದ ನಂತರ ಪ್ರಕರಣ ಭೇದಿಸಲು ಆರೋಪಿಯನ್ನು ಬಂಧಿಸಲು ಸಿಐಡಿಗೆ ಸಾಧ್ಯವಿಲ್ಲ ಎಂಬ ಸಾರ್ವತ್ರಿಕ ಭಾವನೆ ಉಂಟಾಗಿದ್ದು, ಪ್ರಕರಣವನ್ನು ಕೂಡಲೇ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಡಿವೈಎಫ್‌ಐ ಪಂಜಿಮೊಗರು ಘಟಕದ ಕಾರ್ಯದರ್ಶಿ ಇಬ್ರಾಹಿಂ ಕಲೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--